ಬೆಂಗಳೂರು: ಮೈಸೂರು ನಗರ ವ್ಯಾಪ್ತಿಯಲ್ಲಿ ಒಟ್ಟು 12,022 ಅಂಗವಿಕಲರಿದ್ದು, ಕೃತಕ ಕಾಲು ಜೋಡಣೆ ಕೋರಿ ಕಳೆದ ಮೂರು ವರ್ಷಗಳಲ್ಲಿ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಲಿಲ್ಲ ಎಂಬ ಸರ್ಕಾರದ ಉತ್ತರಕ್ಕೆ ಬಿಜೆಪಿ ಶಾಸಕ ಶ್ರೀವತ್ಸ ಟಿ.ಎಸ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಮಂಡಿಸಿದ ಲಿಖಿತ ಉತ್ತರದಿಂದ ಮುಜುಗರಕ್ಕೆ ಒಳಗಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು, ‘ತಪ್ಪಾಗಿದೆ. ಅಧಿಕಾರಿಗಳನ್ನು ಕರೆಸಿ ವಿವರಣೆ ಪಡೆಯುತ್ತೇನೆ’ ಎಂದು ಸಮಜಾಯಿಷಿ ನೀಡಿದರು.

‘ಸರ್ಕಾರದಿಂದ ಅಂಗವಿಕಲರಿಗೆಂದು ಹಲವು ಉತ್ತಮ ಯೋಜನೆಗಳಿವೆ. ಆದರೆ, ಅವು ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಸೇವಾ ಸಿಂಧುಗೆ ಹೋಗಿ ಅರ್ಜಿ ಸಲ್ಲಿಸಿ ಎಂದರೆ ಎಲ್ಲರಿಗೂ ಅಲ್ಲಿ ಹೋಗಿ ಅರ್ಜಿ ಸಲ್ಲಿಸುವುದು ಕಷ್ಟ. ಆದ್ದರಿಂದ, ವಿಶೇಷ ಕ್ಯಾಂಪ್ಗಳನ್ನು ಮಾಡಿ ಅಲ್ಲಿಯೇ ಅರ್ಜಿಗಳನ್ನು ಪಡೆದು ಕೃತಕ ಕಾಲುಗಳನ್ನು ವಿತರಿಸಬೇಕು. ಅಲ್ಲದೇ, ಕೆಲವರ ಕೃತಕ ಕಾಲುಗಳು ಬಹಳ ವರ್ಷ ಬಳಸಿ ಶಿಥಿಲ ಅವಸ್ಥೆಯಲ್ಲಿದ್ದರೆ ಅಂತಹವರಿಗೆ ಹೊಸ ಕೃತಕ ಕಾಲು ಕೊಡಲು ವ್ಯವಸ್ಥೆ ಮಾಡಬೇಕು’ ಎಂದು ಶ್ರೀವತ್ಸ ಸಲಹೆ ನೀಡಿದರು. ಅದಕ್ಕೆ ಸಚಿವರು ಒಪ್ಪಿಗೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.