ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮೇಲೆ ದೌರ್ಜನ್ಯ: ಕುರುಬೂರು ಆಕ್ರೋಶ

Published 12 ಫೆಬ್ರುವರಿ 2024, 16:20 IST
Last Updated 12 ಫೆಬ್ರುವರಿ 2024, 16:20 IST
ಅಕ್ಷರ ಗಾತ್ರ

ನವದೆಹಲಿ: ‘ದೆಹಲಿ ಚಲೋ ಅಭಿಯಾನಕ್ಕೆ ಬರುತ್ತಿದ್ದ ಕರ್ನಾಟಕದ ರೈತರ ಮೇಲೆ ಭೋಪಾಲ್‌ ಬಳಿ ದೌರ್ಜನ್ಯ ನಡೆಸಿ ಬಂಧಿಸಲಾಗಿದೆ. ಇದು ರಾಕ್ಷಸಿ ಕೃತ್ಯ’ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. 

ಸೋಮವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ‘ದೆಹಲಿ ಚಲೋದಲ್ಲಿ ಭಾಗಿಯಾಗಲು ರಾಜ್ಯದ ನೂರಾರು ರೈತರು ಹೊರಟಿದ್ದರು. ಅವರನ್ನು ಭೋಪಾಲ್‌ ಬಳಿ ರೈಲಿನಲ್ಲಿ ಮಧ್ಯರಾತ್ರಿ ಹೊತ್ತಿನಲ್ಲಿ ಎಳೆದಾಡಲಾಗಿದೆ. ಈ ವೇಳೆ, ಕೆಲವು ಮಹಿಳೆಯರಿಗೆ ಗಾಯಗಳಾಗಿವೆ. ರೈತರ ಚಳವಳಿ ಹತ್ತಿಕ್ಕಲು ಕೇಂದ್ರ ಸರ್ಕಾರ ಪೊಲೀಸ್‌ ಬಲವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಪೊಲೀಸರು ಗೂಂಡಾಗಿರಿ’ ಎಂದು ಕಿಡಿಕಾರಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT