ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಕ್ತದ ಮಡುವಿನಲ್ಲಿದ್ದ ಹರ್ಷನ ವಿಡಿಯೊವನ್ನು ಸ್ನೇಹಿತರಿಗೆ ರವಾನಿಸಿದ್ದ ಹಂತಕರು

Last Updated 24 ಫೆಬ್ರುವರಿ 2022, 6:19 IST
ಅಕ್ಷರ ಗಾತ್ರ

ಶಿವಮೊಗ್ಗ: ಸೀಗೆಹಟ್ಟಿಯ ಭಾರತಿ ಕಾಲೊನಿ ಬಳಿ ಬಜರಂಗದಳದ ಕಾರ್ಯಕರ್ತ ಹರ್ಷನನ್ನು ಹತ್ಯೆ ಮಾಡಿದ್ದ ಆರೋಪಿಗಳು, ಆತನ ಮೊಬೈಲ್‌ನಿಂದಲೇ ಸ್ನೇಹಿತರು ಮತ್ತು ಕುಟುಂಬದವರಿಗೆ ಸಂದೇಶ ರವಾನಿಸಿದ್ದರು.ಹರ್ಷರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ದೃಶ್ಯಗಳನ್ನೂಸೆರೆಹಿಡಿದಿದ್ದರು ಎಂಬುದಾಗಿ ಸಂಬಂಧಿಕರು ದೃಢಪಡಿಸಿದ್ದಾರೆ.

ಕೋಮು ದ್ವೇಷವೇ ಕಾರಣ: ಹತ್ಯೆ ಪ್ರಕರಣದ ಮುಖ್ಯ ಆರೋಪಿ ಖಾಸಿಫ್‌ ಹಾಗೂ ಹರ್ಷ ಮಧ್ಯೆ ಹಲವು ಬಾರಿ ಸಣ್ಣಪುಟ್ಟ ಸಂಘರ್ಷಗಳು ನಡೆದಿದ್ದವು. ಪ್ರಖರ ಹಿಂದುತ್ವವಾದಿಯಾಗಿದ್ದ ಹರ್ಷ ಸದಾ ಅವರ ಜತೆ ದ್ವೇಷ ಸಾಧಿಸುತ್ತಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ ಹಾಕಿದ್ದ. ಈಚೆಗೆ ನಡೆದ ಹಿಜಾಬ್‌, ಕೇಸರಿ ಶಾಲು ವಿವಾದದ ಸಮಯದಲ್ಲಿ ಸ್ವತಃ ಮುಂದೆ ನಿಂತು ವಿದ್ಯಾರ್ಥಿಗಳಿಗೆ ಕೇಸರಿಶಾಲು ಹಂಚಿದ್ದ ಎನ್ನಲಾಗಿದೆ. ಈ ಎಲ್ಲ ಅಂಶಗಳಿಂದ ಅವರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು. ಕೋಮು ಸಂಘರ್ಷದ ಆರೋಪದಲ್ಲಿ ಜೈಲು ಸೇರಿದ್ದ ಆಸೀಫ್‌ ಉಲ್ಲಾಖಾನ್‌ ವಾರದ ಹಿಂದಷ್ಟೆ ಜಾಮೀನಿನ ಮೇಲೆ ಹೊರಬಂದಿದ್ದ. ಅವನ ನೆರವು ಪಡೆದು ಖಾಸಿಫ್‌ ಹತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕರ್ಫ್ಯೂ ವಿಸ್ತರಣೆ: ನಗರದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಆದರೂ, ಮುಂಜಾಗ್ರತಾ ಕ್ರಮವಾಗಿ ಫೆ.26ರವರೆಗೂ ಕರ್ಫ್ಯೂ ಮುಂದುವರಿಸಲಾಗಿದೆ. ಶಾಲಾ–ಕಾಲೇಜುಗಳಿಗೂ ಶನಿವಾರದವರೆಗೆ ರಜೆ ನೀಡಲಾಗಿದೆ.

ಡ್ರೋನ್‌ ಕಣ್ಗಾವಲು: ಹರ್ಷ ಹತ್ಯೆಯ ನಂತರ ನಗರದ ಅಪರಾಧ ಚಟುವಟಿಕೆಯ ಮೇಲೆ ಕಣ್ಗಾವಲು ಇಡಲು ನಕ್ಸಲ್ ನಿಗ್ರಹ ಪಡೆ ಹಾಗೂ ಕಾರವಾರ, ಮಂಡ್ಯದಿಂದ 6 ಡ್ರೋನ್‌ ಕ್ಯಾಮೆರಾ ತರಿಸಲಾಗಿದೆ.

ಅಪರಾಧ ಪತ್ತೆಗೆ ಡ್ರೋನ್‌ ಕಣ್ಗಾವಲು
ಹರ್ಷ ಹತ್ಯೆಯ ನಂತರ ನಗರದ ಅಪರಾಧ ಚಟುವಟಿಕೆಯ ಮೇಲೆ ಕಣ್ಗಾವಲು ಇಡಲು ನಕ್ಸಲ್ ನಿಗ್ರಹ ಪಡೆ ಹಾಗೂ ಕಾರವಾರ, ಮಂಡ್ಯದಿಂದ 6 ಡ್ರೋನ್‌ ಕ್ಯಾಮೆರಾ ತರಿಸಲಾಗಿದೆ. ಪ್ರತಿಯೊಂದು ಡ್ರೋನ್ 5 ಕಿ.ಮೀ ವ್ಯಾಪ್ತಿಯಲ್ಲಿನ ಚಲನವಲನ ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. ಮೂರು ಬ್ಯಾಟರಿ ಸಾಮರ್ಥ್ಯದ ಉನ್ನತ ತಂತ್ರಜ್ಞಾನದ ಡ್ರೋನ್‌ಗಳಿವು.

ಫೆ.26ರವರೆಗೂ ಕರ್ಫೂ ವಿಸ್ತರಣೆ
ನಗರದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಆದರೂ, ಮುಂಜಾಗ್ರತಾ ಕ್ರಮವಾಗಿ ಫೆ.26ರವರೆಗೂ ಕರ್ಫ್ಯೂ ಮುಂದುವರಿಸಲಾಗಿದೆ. ಶಾಲಾ–ಕಾಲೇಜುಗಳಿಗೂ ಶನಿವಾರದವರೆಗೆ ರಜೆ ನೀಡಲಾಗಿದೆ.

*

ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಹಿಂದೂ ಕಾರ್ಯಕರ್ತನ ಹತ್ಯೆ ನಡೆದಿರುವುದು ಬೇಸರ ತರಿಸಿದೆ.
-ನಳಿನ್‌ ಕುಮಾರ್ ಕಟೀಲ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT