ಬೆಂಗಳೂರು: ಕಾಂಗ್ರೆಸ್ ನಾಯಕರಲ್ಲಿ ರಾಷ್ಟ್ರಪ್ರೇಮ ಕ್ಷೀಣಿಸಿದೆ. ಭಯೋತ್ಪಾದಕ ದಾಳಿಗಳು ನಡೆದಾಗ ಅವರ ಪ್ರತಿಕ್ರಿಯೆಗಳು ಸಂಶಯ ಮೂಡಿಸುತ್ತವೆ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಭಾರತ–ಪಾಕಿಸ್ತಾನದ ಮಧ್ಯೆ ಯುದ್ದದ ಕಾರ್ಮೋಡ ದಟ್ಟವಾಗಿರುವಾಗ ಕಾಂಗ್ರೆಸ್ ಹಿರಿಯ ನಾಯಕರ ಹೇಳಿಕೆ ಗಮನಿಸಿದರೆ 55 ವರ್ಷ ಈ ದೇಶದಲ್ಲಿ ಆಡಳಿತ ನಡೆಸಿದ್ದು ಇವರಾ ಎನ್ನುವ ಸಂಶಯ ಮೂಡುತ್ತದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರಪ್ರೇಮ ಪತನವಾಗಿರುವುದು ಸ್ಪಷ್ಟವಾಗಿದೆ ಎಂದು ದೂರಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಯುದ್ದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಈಗಾಗಲೇ ಮೂರು ಸೇನಾಪಡೆಗಳಿಗೆ ಅಧಿಕಾರ ಕೊಟ್ಡಿದ್ದಾರೆ. ಇಂತಹ ಸಮಯದಲ್ಲಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ದೆಹಲಿ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವಾರು ಕಡೆ ಭಯೋತ್ಪಾದಕ ದಾಳಿಗಳು ನಡೆದಾಗ ಕ್ರಮ ತೆಗೆದುಕೊಳ್ಳದಿರುವುದು, ಮುಂಬೈ ಮೇಲೆ 2008ರಲ್ಲಿ ನಡೆದ ದಾಳಿಯಲ್ಲಿ 130 ಅಮಾಯಕರ ಸಾವು ಘಟಿಸಿದಾಗ, ಗುಪ್ತಚರ ವೈಫಲ್ಯ ಆಗಿತ್ತು. ಆ ಬಳಿಕ, ಉಗ್ರರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎನ್ನುವ ತೀರ್ಮಾನ ತೆಗೆದುಕೊಂಡಿದ್ದನ್ನು ಆ ಪಕ್ಷದ ನಾಯಕರು ಮರೆತಂತಿದೆ. ಇಂದಿರಾ ಗಾಂಧಿಯವರು ಯುದ್ದ ಮಾಡುವಾಗ ಅಂದಿನ ಸೇನೆಯ ಮುಖ್ಯಸ್ಥ ಮಾಣೆಕ್ ಷಾ ಅವರ ಮಾತು ಕೇಳಿದ್ದರು. ಆ ಸಂದರ್ಭದಲ್ಲಿ ಎಲ್ಲ ವಿರೋದ ಪಕ್ಷಗಳು ಸರ್ಕಾರದ ಪರವಾಗಿ ನಿಂತಿದ್ದವು. ಅದರ ನೆನಪೇ ಇಲ್ಲದಂತೆ, ಅತ್ಯಂತ ಬೇಜವಾಬ್ದಾರಿ ವಿರೋಧ ಪಕ್ಷವಾಗಿ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ ಎಂದು ಬೊಮ್ಮಾಯಿ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.