ಬೆಂಗಳೂರು: ಸರ್ಕಾರಿ ಭೂಮಿಯನ್ನು ನೋಂದಣಿ ಮಾಡಿಕೊಡುವ ನೆಪದಲ್ಲಿ ರಾಜ್ಯ ಸರ್ಕಾರವು ಜನರನ್ನು ಲೂಟಿ ಮಾಡುತ್ತಿದೆ. ಆದರೆ ಅದಕ್ಕೆ, ‘ಹಕ್ಕುಪತ್ರ ವಿತರಣೆ’ ಎಂದು ಕರೆಯುತ್ತಿದೆ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಮ್ಮ ಸರ್ಕಾರ ಇದ್ದಾಗ, ಅಕ್ರಮ ಇದ್ದುದ್ದನ್ನು ಸಕ್ರಮ ಮಾಡಿದ್ದೆವು. ಜತೆಗೆ ಸಾಲಸಿಗುವ ವ್ಯವಸ್ಥೆಯನ್ನೂ ಮಾಡಿದ್ದೆವು ಎಂದರು.

ಈಗ ಸರ್ಕಾರವು, ಸರ್ಕಾರಿ ಜಮೀನನ್ನೇ ನೋಂದಣಿ ಮಾಡಿಕೊಳ್ಳಿ ಎಂದು ಹೇಳಿ ಬಡ ಕುಟುಂಬದ ಮೇಲೆ ಮೂರು–ನಾಲ್ಕು ಲಕ್ಷ ರೂಪಾಯಿ ಹೊರೆ ಹೇರಿದೆ’ ಎಂದಿದ್ದಾರೆ.

‘ಗ್ರಾಮೀಣ ಪ್ರದೇಶದಲ್ಲಿ ಹಕ್ಕುಪತ್ರ ವಿತರಣಾ ಸಮಾವೇಶ ಮಾಡಿದರೆ, ಜನರು ಬರುವುದಿಲ್ಲ ಎಂದು ಇವರಿಗೆ ಗೊತ್ತು. ಹೀಗಾಗಿ ಹಳ್ಳಿಗಾಡಿನಲ್ಲಿ ಸಮಾವೇಶ ಮಾಡಿದ್ದಾರೆ. ಇದು ಶೂನ್ಯ ಸಾಧನೆಯ, ಭ್ರಷ್ಟಾಚಾರದ ಸಮಾವೇಶ’ ಎಂದು ಟೀಕಿಸಿದ್ದಾರೆ.
.ಸಾಧನಾ ಸಮಾವೇಶ: 2028ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ 141ಸೀಟು; ಡಿ.ಕೆ.ಶಿವಕುಮಾರ್.ಸಾಧನಾ ಸಮಾವೇಶ: ಲಕ್ಷ ಜನರಿಗೆ ಭೂ ಹಕ್ಕುಪತ್ರ ವಿತರಣೆಗೆ ಸಜ್ಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.