‘ಪ್ರೀತಿ ನನ್ನನ್ನು ಕಟ್ಟಿಹಾಕಿದೆ’
‘ನನ್ನ ಜೀವನದ ಶ್ರೇಷ್ಠ ದಿನ ಇಂದು. ನಿಮ್ಮ ಪ್ರೀತಿ–ವಿಶ್ವಾಸ ಪಕ್ಷಾತೀತವಾದ ಮಾತುಗಳು ನನ್ನನ್ನು ಕಟ್ಟಿಹಾಕಿವೆ. ನಾಳೆಯಿಂದ ಹೇಗೆ ಸದನ ನಡೆಸಬೇಕು ಎಂಬುದೇ ಇದೀಗ ನನ್ನ ಪ್ರಶ್ನೆಯಾಗಿದೆ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ‘ನಾನು ಮೊದಲು 1978ರಲ್ಲಿ ಚುನಾವಣೆಗೆ ನಿಂತಾಗ ₹12 ಸಾವಿರ ವೆಚ್ಚ ಮಾಡಿದ್ದೆ. 17 ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಎಂಟು ಬಾರಿ ನನ್ನನ್ನು ಆರಿಸಿರುವ ಶಿಕ್ಷಕರ ಋಣ ತೀರಿಸಲು 24 ಗಂಟೆಯೂ ಕೆಲಸ ಮಾಡುತ್ತಿದ್ದೇನೆ. ನಾಲ್ಕೈದು ತಾಸು ನೀವೆಲ್ಲರೂ ಮಾತನಾಡಿದ್ದನ್ನು ಎಂದಿಗೂ ಮರೆಯುವುದಿಲ್ಲ’ ಎಂದರು.