ಬೆಂಗಳೂರು:ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಬಳಸುವ ಬಟ್ಟೆಯ ಮುಖಗವಸನ್ನು ನಿತ್ಯ ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಮನೆಯಲ್ಲಿ ತಯಾರಿಸಿದ ಹಾಗೂ ಮರು ಬಳಕೆ ಮಾಡಬಹುದಾದ ಮಾಸ್ಕ್‌ಗಳನ್ನು ನಾಲ್ಕು ವಿಧಾನಗಳಲ್ಲಿ ಸ್ವಚ್ಛಗೊಳಿಸಬಹುದಾಗಿದೆ. ಸಾಬೂನು ಮತ್ತು ಬೆಚ್ಚನೆಯ ನೀರನ್ನು ಬಳಸಿ ಮುಖಗವಸನ್ನು ಸಂಪೂರ್ಣವಾಗಿ ತೊಳೆಯಬೇಕು. ಬಿಸಿಲಿನಲ್ಲಿ ಕನಿಷ್ಠ ಐದು ಗಂಟೆಗಳವರೆಗೆ ಒಣಗಿಸಬೇಕು. ಇಲ್ಲವಾದಲ್ಲಿ ಪ್ರೆಶರ್ ಕುಕ್ಕರಿನ ಒಳಗೆ ಉಪ್ಪುನೀರು ಹಾಕಿ, ಅದರಲ್ಲಿ ಮುಖಗವಸನ್ನು ಇರಿಸಬೇಕು. ಹತ್ತು ನಿಮಿಷ ಕುದಿಸಿ, ಬಳಿಕ ಒಣಗಿಸಬೇಕು ಎಂದು ಇಲಾಖೆ ತಿಳಿಸಿದೆ.

ಪ್ರೆಶರ್ ಕುಕ್ಕರ್ ಇಲ್ಲದಿದ್ದಲ್ಲಿ ಬಟ್ಟೆಯ ಮುಖಗವಸನ್ನು ಬಿಸಿ ನೀರಿನಲ್ಲಿ 15 ನಿಮಿಷಗಳ ವರೆಗೆ ಕುದಿಸಬೇಕು. ಸಾಬೂನು ನೀರಿನಿಂದಲೂ ಸ್ವಚ್ಛಗೊಳಿಸಬಹುದು. ಮುಖಗವಸು ಒಣಗಿದ ಮೇಲೆ ಇಸ್ತ್ರಿ ಪೆಟ್ಟಿಗೆಯಿಂದ ಐದು ನಿಮಿಷಗಳ ಕಾಲ ಬಿಸಿ ಮಾಡಬೇಕು ಎಂದು ಸಲಹೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.