ಬೆಳಗಾವಿ: ಕೋವಿಡ್–19 ಸೋಂಕು ತಗುಲಿ ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 38 ಮಂದಿ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಇಲ್ಲಿ ಒಂದೇ ದಿನ ಇಷ್ಟು ಜನರು ಬಿಡುಗಡೆಯಾಗಿದ್ದು ಇದೇ ಮೊದಲಾಗಿದೆ.

ಇವರಲ್ಲಿ 37 ಮಂದಿ ಅಥಣಿ, ಹುಕ್ಕೇರಿ, ರಾಯಬಾಗ ಹಾಗೂ ಸವದತ್ತಿ ತಾಲ್ಲೂಕಿನವರು. ಒಬ್ಬರು ಬಾಗಲಕೋಟೆಯವರು ಎಂದು ಬಿಮ್ಸ್ ಪ್ರಕರಣೆ ತಿಳಿಸಿದೆ.

ರೋಗಿ ಸಂಖ್ಯೆಗಳಾದ 3145, 3149, 3697, 4023, 4543, 4544, 4547, 4551, 4553, 4554, 4559, 5389, 835, 2269, 2271, 2272, 3683, 3690, 4561, 4578, 4576, 5413, 5391, 5392, 5415, 5414, 5403, 5401, 5402, 5398, 5400, 5405, 5407, 5417, 5418, 5421, 5422, 5424 ಬಿಡುಗಡೆ ಆದವರು.

ಈ ನಡುವೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಮಹಾರಾಷ್ಟ್ರದಿಂದ ಹಿಂತಿರುಗಿದ ಹಿನ್ನೆಲೆಯ ಹೊಂದಿರುವ 61 ವರ್ಷದ ವ್ಯಕ್ತಿಗೆ ಕೋವಿಡ್–19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಇಲ್ಲಿನ ಸೋಂಕಿತರ ಸಂಖ್ಯೆ 296ಕ್ಕೆ ಏರಿಕೆಯಾಗಿದೆ. ಸೋಮವಾರ ಹಾಗೂ ಮಂಗಳವಾರ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ವರದಿ ಆಗಿರಲಿಲ್ಲ.

ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಗುಣಮುಖರ ಸಂಖ್ಯೆ ಏರುಮುಖವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.