ಬೆಳಗಾವಿ: ಉಪಚುನಾವಣೆ ಗೆಲುವಿನ ಉಮೇದಿನ ಜತೆಗೆ ಆಡಳಿತ ಪಕ್ಷದಲ್ಲಿನ ಒಗ್ಗಟ್ಟು, ನಾಯಕತ್ವದ ಜಗ್ಗಾಟದಿಂದಾಗಿ ವಿಪಕ್ಷಗಳಲ್ಲಿನ ಬಿಕ್ಕಟ್ಟಿನ ನಡುವೆಯೇ, ಸೋಮವಾರ ಇಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನ, ರಚನಾತ್ಮಕ ಚರ್ಚೆಗಿಂತ ಕದನ ಕಣವಾಗುವ ಸಾಧ್ಯತೆಯೇ ದಟ್ಟವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಚುಕ್ಕಾಣಿ ಹಿಡಿದು ಒಂದೂವರೆ ವರ್ಷ ಮುಗಿಯುವ ಹೊತ್ತಿಗೆ ಹಲವು ಭ್ರಷ್ಟಾಚಾರದ ಆರೋಪಗಳು ಸರ್ಕಾರದ ಕೊರಳನ್ನು ಬಿಗಿ ಮಾಡಿವೆ. ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧವೇ ಎಫ್ಐಆರ್ ದಾಖಲು, ವಾಲ್ಮೀಕಿ ಹಗರಣದಲ್ಲಿ ಸಚಿವರೊಬ್ಬರ ತಲೆದಂಡ, ಅಬಕಾರಿ ಸಚಿವರ ವಿರುದ್ಧ ₹700 ಕೋಟಿ ಹಗರಣದ ಆರೋಪ, ಬಳ್ಳಾರಿಯ ಆಸ್ಪತ್ರೆಯಲ್ಲಿನ ದಾರುಣ ಸಾವುಗಳು ಸೇರಿ ಎಂಟು ತಿಂಗಳಿನಲ್ಲಿ 327 ಬಾಣಂತಿಯರ ದುರ್ಮರಣ, ವಕ್ಫ್ ಆಸ್ತಿ ವಿವಾದದಂತಹ ಪ್ರಬಲ ಅಸ್ತ್ರಗಳು ವಿಪಕ್ಷ ನಾಯಕರ ಕೈಯಲ್ಲಿವೆ.

ಪ್ರತಿಯಾಗಿ ಆಡಳಿತ ಪಕ್ಷದ ಬಳಿಯೂ ಬಲವಾದ ಪ್ರತ್ಯಸ್ತ್ರಗಳಿವೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಹಲವು ರಾಜ್ಯಗಳಲ್ಲಿ ಮುಖ್ಯಮಂತ್ರಿ ಕುರ್ಚಿಗಳನ್ನೇ ಅಲುಗಾಡಿಸಿದಂತೆ, ಕರ್ನಾಟಕದಲ್ಲೂ ಮಾಡುತ್ತಿದೆ ಎಂಬ ಪ್ರಬಲ ವಾದ, ಕೋವಿಡ್ ನಿರ್ವಹಣೆ ಹೆಸರಿನಲ್ಲಿ ₹7 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಖರೀದಿ ಹಗರಣದ ತನಿಖಾ ವರದಿಯಲ್ಲಿ ಬಿ.ಎಸ್.ಯಡಿಯೂರಪ್ಪ, ಶ್ರೀರಾಮುಲು ಹೆಸರಿನ ಉಲ್ಲೇಖ, ಯಡಿಯೂರಪ್ಪ ಕುಟುಂಬದ ವಿರುದ್ಧದ ಬಿಡಿಎ ಹಗರಣ, ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಮುಂದಿಟ್ಟು ವಿಪಕ್ಷವನ್ನು ಕಟ್ಟಿ ಹಾಕಲು ಆಡಳಿತ ಪಕ್ಷ ಅಣಿಯಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ 137 ಶಾಸಕರ ಏಕತೆಯ ಬಲವೇ, ಕಾಂಗ್ರೆಸ್ಗೆ ತ್ರಾಣವಾಗುವ ಸಾಧ್ಯತೆಯೂ ಇದೆ.

ಬೆಂಗಳೂರಿನ ಅಧಿವೇಶನದ ವೇಳೆ ವಾಲ್ಮೀಕಿ ನಿಗಮ, ಹಾಗೂ ಮುಡಾ ಪ್ರಕರಣ ಪ್ರತಿಪಕ್ಷಗಳ ಬತ್ತಳಿಕೆಯಲ್ಲಿತ್ತು. ಮುಡಾ ಕುರಿತು ಚರ್ಚೆಗೆ ಆಸ್ಪದ ನೀಡದೇ ಸರ್ಕಾರ ಮುಜುಗರದಿಂದ ಪಾರಾಗಿತ್ತು.

ಮುಡಾ ಪ್ರಕರಣ ಕುರಿತು ಲೋಕಾಯುಕ್ತ ತನಿಖೆ, ವಾಲ್ಮೀಕಿ ಮತ್ತು ಮುಡಾ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಕೈಗೆತ್ತಿಕೊಂಡು ತನಿಖೆ ನಡೆಸಿ, ಮಾಹಿತಿಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುತ್ತಿರುವುದು ಬಿಜೆಪಿ ನಾಯಕರಿಗೆ ವರವಾಗಿ ಪರಿಣಮಿಸಿದೆ. ಆದರೆ, ನಾಯಕರ ಮಧ್ಯೆ ಇರುವ ದೊಡ್ಡ ಮಟ್ಟದ ಭಿನ್ನಾಭಿಪ್ರಾಯವೇ ಬಿಜೆಪಿಗೆ ಮುಳುವಾಗಿದೆ. ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕರೂ ಆಗಿರುವ ಬಸನಗೌಡ ಪಾಟೀಲ ಯತ್ನಾಳ ಬಣ ತಿರುಗಿ ಬಿದ್ದಿರುವುದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರವನ್ನು ಹೆಡೆಮುರಿ ಕಟ್ಟುವ ಚಾಣಾಕ್ಷತನ ವಿರೋಧ ಪಕ್ಷ ನಾಯಕ ಆರ್. ಅಶೋಕ ಅವರಿಗೆ ಇಲ್ಲದಿರುವುದು ಕಾಂಗ್ರೆಸ್ಗೆ ಅನುಕೂಲಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಶಾಸಕಾಂಗ ಪಕ್ಷದ ನಾಯಕನ ಬಗ್ಗೆ ಯತ್ನಾಳ ಸೇರಿ ಹಲವರಿಗೆ ಅಸಮಾಧಾನ ಇರುವುದು ಸದನದೊಳಗಿನ ಬಿಜೆಪಿ ಹೋರಾಟಕ್ಕೆ ಅಡ್ಡಿ ಉಂಟು ಮಾಡುವ ಸಂಭವವೇ ಹೆಚ್ಚಾಗಿದೆ.

ಎನ್ಡಿಎ ಭಾಗವಾಗಿರುವ ಜೆಡಿಎಸ್ನಲ್ಲೂ ಶಾಸಕಾಂಗ ಪಕ್ಷದ ನಾಯಕ ಸುರೇಶ ಬಾಬು ಅವರ ಬಗೆಗೆ ಹೆಚ್ಚಿನ ಒಲವಿಲ್ಲ. ಪಕ್ಷದ ನಾಯಕರಾಗಿ, ಸದನದಲ್ಲಿ ಸರ್ಕಾರದ ಹುಳುಕು ಬಯಲಿಗೆಳೆಯುತ್ತಿದ್ದ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದ ಮೇಲೆ, ಶಾಸಕರಲ್ಲಿ ಒಗ್ಗಟ್ಟು ಕಾಣದಾಗಿದೆ. ಜಿ.ಟಿ. ದೇವೇಗೌಡ, ಎಚ್.ಟಿ.ಕೃಷ್ಣಪ್ಪ ಪಕ್ಷದ ಜತೆಗೆ ಅಂತರ ಕಾಯ್ದುಕೊಂಡಿದ್ದಾರೆ ಸದನದಲ್ಲಿ ಅಬ್ಬರಿಸಿರುವವರ ಸಂಖ್ಯೆಯೇ ಕಡಿಮೆ ಇದೆ. ಪ್ರತಿ ಮಾತಿಗೆ ಎದ್ದು ಸದನದಲ್ಲಿ ನಿಲ್ಲುತ್ತಿದ್ದ ಎಚ್.ಡಿ. ರೇವಣ್ಣ, ತಮ್ಮ ಕುಟುಂಬದ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಿಂದಾಗಿ ಮಾತನ್ನೇ ಆಡದ ಸ್ಥಿತಿ ತಲುಪಿದ್ದಾರೆ. ಹೀಗಾಗಿ, ವಿಪಕ್ಷಗಳ ದೌರ್ಬಲ್ಯವೇ ಆಡಳಿತ ಪಕ್ಷದ ಬಲವಾಗಿ ಪರಿವರ್ತನೆಯಾದಂತಿದೆ.

ಇತ್ತ, ಕಾಂಗ್ರೆಸ್ನಲ್ಲಿ ಏಕಮತ ಮೂಡಿದೆ. ಸಿ.ಎಂ ಬದಲಾವಣೆಯ ವಿಷಯ, ಐದು ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿ, ಸಚಿವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳದಂತಹ ವಿಷಯಗಳನ್ನು ಆಡಳಿತ ಪಕ್ಷವನ್ನು ಕಾಡಿದ್ದುಂಟು. ಮೂರು ಉಪಚುನಾವಣೆಗಳಲ್ಲಿ ಮಾಜಿ ಮುಖ್ಯಮಂತ್ರಿಗಳು ಪ್ರತಿನಿಧಿಸುತ್ತಿದ್ದ ಎರಡು ಕ್ಷೇತ್ರಗಳನ್ನು ಕಿತ್ತುಕೊಂಡು, ಮೂರರಲ್ಲಿಯೂ ಜಯ ಸಾಧಿಸಿರುವುದು, ದೇವೇಗೌಡರ ಕೋಟೆಯಂತಿದ್ದ ಹಾಸನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಯಶಸ್ಸು ಆ ಪಕ್ಷದಲ್ಲಿ ಹುಮ್ಮಸ್ಸು ತಂದಂತೆ ಕಾಣಿಸುತ್ತಿದೆ. ಆಂತರಿಕ ಕಚ್ಚಾಟದಿಂದ ಬಳಲುತ್ತಿರುವ ಬಿಜೆಪಿ, ಜೆಡಿಎಸ್ ಪಕ್ಷಗಳು, ಅಷ್ಟು ಸುಲಭಕ್ಕೆ ಈ ಬಾರಿ ಆಡಳಿತ ಪಕ್ಷವನ್ನು ಸದನದಲ್ಲಿ ಕಟ್ಟಿಹಾಕುವುದು ಸುಲಭದ ಸಂಗತಿಯಂತೆ ತೋರುತ್ತಿಲ್ಲ.

ವಕ್ಫ್–ಬಿಪಿಎಲ್ ವಿಷಯ

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ, ಮುಸ್ಲಿಮರ ಓಲೈಕೆಗೆ ಹಲವು ಕಾರ್ಯಕ್ರಮ ರೂಪಿಸುತ್ತಿದೆ ಎಂಬ ಸಂಕಥನವನ್ನು ಬಿಜೆಪಿ ಪ್ರಬಲವಾಗಿ ಮುನ್ನೆಲೆಗೆ ತಂದಿತು. ತಲೆತಲಾಂತರಗಳಿಂದ ಅನುಭವಿಸುತ್ತಿದ್ದ ಆಸ್ತಿಯ ವಿಚಾರದಲ್ಲಿ ರೈತರಿಗೆ, ದೇಗುಲ ಮತ್ತು ಮಠಗಳಿಗೆ ನೋಟಿಸ್ ನೀಡಿದ ಸರ್ಕಾರ, ಹಿಂದೂಗಳ ಮೇಲೆ ಪ್ರಹಾರ ಮಾಡುತ್ತಿದೆ ಎಂದು ಆಪಾದಿಸಿದ ಬಿಜೆಪಿ, ಹೋರಾಟವನ್ನು ತೀವ್ರಗೊಳಿಸಿತು.

ಈ ಕುರಿತು ವಿಜಯೇಂದ್ರ ಹಾಗೂ ಯತ್ನಾಳ ಬಣಗಳ ಜಗಳ ಬೀದಿಗೆ ಬಂದು ನಿಂತಿದೆ. ಹೀಗಾಗಿ, ಈ ವಿಚಾರ ಮುಂದಿಟ್ಟುಕೊಂಡು, ಸದನದೊಳಗೆ ನಡೆಸಬಹುದಾದ ಸಂಭಾವ್ಯ ಹೋರಾಟಕ್ಕೂ ವಿಪಕ್ಷ ನಾಯಕರ ಮಧ್ಯೆಯೇ ಸಹಮತ ಇದ್ದಂತಿಲ್ಲ. ಕುಮಾರ್ ಬಂಗಾರಪ್ಪ ನೇತೃತ್ವದ ವಿಧಾನಮಂಡಲದ ಸಮಿತಿಯ ವರದಿ ಆಧರಿಸಿ, ಕಾಂಗ್ರೆಸ್ ಅವಧಿಗಿಂತ ಬಿಜೆಪಿ ಸರ್ಕಾರದ ಅವಧಿಯಲ್ಲೇ ಹೆಚ್ಚು ನೋಟಿಸ್ ನೀಡಲಾಗಿದೆ ಎಂಬ ಸದನದ ದಾಖಲೆ ಸರ್ಕಾರದ ಬಳಿ ಇದೆ. ಇದೇ ವಿಷಯವನ್ನು ಮುಂದಿಟ್ಟು, ವಿಪಕ್ಷಗಳ ಬಾಯಿಯನ್ನು ಕಟ್ಟಿ ಹಾಕಲು ಸರ್ಕಾರ ತಯಾರಿ ನಡೆಸಿದೆ.

ಬಿಪಿಎಲ್ ಪಡಿತರ ಚೀಟಿ ರದ್ದತಿ ವಿಚಾರ ಮುಂದಿಟ್ಟು ಹೋರಾಟ ನಡೆಸಲು ವಿರೋಧ ಪಕ್ಷ ಅಣಿಯಾಗಿದೆಯಾದರೂ, ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಈ ಪ್ರಕ್ರಿಯೆ ನಡೆದಿದೆ ಎಂಬ ಪ್ರತಿವಾದ ಮುಂದಿಡಲು ಸರ್ಕಾರ ಸಿದ್ಧವಾಗಿದೆ.

ಅಸ್ತ್ರ–ಪ್ರತ್ಯಸ್ತ್ರ ಹೂಡುವ ಆಡಳಿತ–ವಿಪಕ್ಷಗಳ ನಡೆಯೇ ಬೆಳಗಾವಿ ಕಲಾಪವನ್ನು ಬಾಧಿಸುವ ಸಂಭವ ಹೆಚ್ಚಿದೆ. ಹೀಗಾಗಿ, ನಾಡಿನ ಪ್ರಗತಿಗೆ ಸಂಬಂಧಿಸಿದ ಸಂಗತಿಗಳು, ಪ್ರಾಕೃತಿಕ ವಿಕೋಪ ತಂದ ಸಮಸ್ಯೆ, ಕಿತ್ತೂರು ಮತ್ತು ಕರ್ನಾಟಕ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕುರಿತಾಆದ ರಚನಾತ್ಮಕ ಚರ್ಚೆಗಳಿಗೆ ಈ ಬಾರಿಯೂ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದ್ದಂತೆ ಕಾಣಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.