ಬೆಂಗಳೂರು: ಐಪಿಒ (ಆರಂಭಿಕ ಸಾರ್ವಜನಿಕ ಹೂಡಿಕೆ) ಮೂಲಕ ಬಂಡವಾಳ ಮಾರುಕಟ್ಟೆ ಪ್ರವೇಶಿಸಲು ನವೋದ್ಯಮಗಳಿಗೆ ಉತ್ತಮ ಅವಕಾಶಗಳಿದ್ದರೂ, ಯಾಕಾಗಿ ಐಪಿಒ, ಮಾರುಕಟ್ಟೆಯಲ್ಲಿ ಏನಾಗುತ್ತಿದೆ ಎನ್ನುವ ಅಂಶಗಳು ತಿಳಿದಿರಬೇಕು ಎಂದು ತಜ್ಞರು ಕಿವಿಮಾತು ಹೇಳಿದರು.

‘ನವೋದ್ಯಮಗಳಿಗೆ ಐಪಿಒ ಅವಕಾಶಗಳು ಮತ್ತು ಸವಾಲುಗಳು’ ವಿಷಯದ ಕುರಿತು ಗುರುವಾರ ಸಂವಾದ ನಡೆಯಿತು. ‘ಗ್ರೋಥ್‌ಸ್ಟೋರಿ’ಯ ಪಾಲುದಾರ ಗಣೇಶ್ ಕೃಷ್ಣನ್ ಅವರು ನಡೆಸಿಕೊಟ್ಟ ಸಂವಾದದಲ್ಲಿ ‘ಐಪಿಒ’ ಕುರಿತು ತಜ್ಞರು ತಮ್ಮ ಅಭಿಪ್ರಾಯ ಹಂಚಿಕೊಂಡರು.

‘ಕಂಪನಿಯ ಬೆಳವಣಿಗೆಗೆ ಐಪಿಒ ಮೂಲಕ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳುತ್ತವೆ. ಐಪಿಒಗೆ ಮುನ್ನ ಬಹಳ ಎಚ್ಚರಿಕೆಯಿಂದ ಇರಬೇಕು. ಪ್ರತೀ ತ್ರೈಮಾಸಿಕದಲ್ಲಿ ಕಂಪನಿ ಮೌಲ್ಯವನ್ನು ಲೆಕ್ಕ ಹಾಕಲಾಗುತ್ತದೆ. ಕಂಪನಿಯ ಪ್ರತಿ ಹೆಜ್ಜೆಯನ್ನೂ ಹೂಡಿಕೆದಾರರು ಗಮನಿಸುತ್ತಿರುತ್ತಾರೆ. ಸಣ್ಣ ಪ್ರಮಾಣದ ಬದಲಾವಣೆ ಆದರೂ ಅದು ಕಂಪನಿಯ ಮೇಲೆ ಪರಿಣಾಮ ಬೀರುತ್ತದೆ. 5–6 ವರ್ಷಗಳಲ್ಲಿ ವಹಿವಾಟನ್ನು ಅಭಿವೃದ್ಧಿಪಡಿಸಬೇಕು ಎನ್ನುವುದಾದರೆ, ಯಶಸ್ವಿಯಾಗಿ ನೋಂದಣಿ ಆಗುವುದು ಬಹಳ ಮುಖ್ಯ’ ಎಂದು ಐಐಎಫ್‌ಎಲ್ ಅಧ್ಯಕ್ಷ ನಿಪುನ್ ಗೋಯಲ್ ಹೇಳಿದರು.

ತಂತ್ರಜ್ಞಾನ ಆಧಾರಿತ ಕಂಪನಿಗಳು ಸಾರ್ವಜನಿಕರಿಂದ ಬಂಡವಾಳ ಸಂಗ್ರಹಕ್ಕೆ ಹೆಚ್ಚು ಹೆಚ್ಚು ಮುಂದಾಗುತ್ತಿವೆ. ಕೋವಿಡ್‌ನಿಂದಾಗಿ ಬಹಳಷ್ಟು ಕಂಪನಿಗಳು ಡಿಜಿಟಲೀಕರಣಕ್ಕೆ ಒಳಗಾಗಿವೆ. ಇದರಿಂದಾಗಿ ಹೂಡಿಕೆ ಅವಕಾಶಗಳು ತೆರೆದುಕೊಳ್ಳುತ್ತಿವೆ ಎಂದು ಎಕ್ಸಿಸ್ ಕ್ಯಾಪಿಟಲ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪಿಟಾಲೆ ತಿಳಿಸಿದರು.

ಐಪಿಒಗೆ ಬಂದರೆ ಸಂಪತ್ತು ಮೌಲ್ಯ ಹೆಚ್ಚಿಸಿಕೊಳ್ಳಬಹುದು ಎನ್ನುವುದು ಒಂದು ಭ್ರಮೆ. ಹೀಗೆ ಮಾಡಬೇಕು ಎಂದಾದರೆ ಐಪಿಒಗಿಂತಲೂ ಖಾಸಗಿಯವರಿಗೆ ಮಾರಾಟ ಮಾಡುವುದೇ ಸೂಕ್ತ

-ಮನಿಷ್ ಅಗರ್ವಾಲ್, ಸಿಇಒ ನಜಾರಾ ಟೆಕ್ನಾಲಜೀಸ್

ದೊಡ್ಡ ಮೊತ್ತದ ಐಪಿಒ ಉತ್ತಮ. ಸಣ್ಣ ಮೊತ್ತದ ಐಪಿಒ ಇದ್ದರೆ, ಷೇರುಗಳ ಹಂಚಿಕೆಯು ಕಷ್ಟವಾಗುತ್ತದೆ. ಅರ್ಥಪೂರ್ಣವಾದ ಹಂಚಿಕೆ ಆಗಬೇಕು ಎಂದರೆ ₹ 15,000 ಕೋಟಿಗಿಂತ ಹೆಚ್ಚಿನ ಮೊತ್ತದ ಐಪಿಒ ಇರಬೇಕು

-ನಿಪುನ್ ಗೋಯಲ್, ಐಐಎಫ್‌ಎಲ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.