ಬೆಂಗಳೂರು: ಬೆಂಗಳೂರಿಗೆ ಸುರಂಗ ಮಾರ್ಗವೇ ಮದ್ದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದರು. ಈಗ ಯಾಕೆ ಯು ಟರ್ನ್ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.

‘ಹಿಮಾಚಲ ಪ್ರದೇಶದ ಅಟಲ್ ಸುರಂಗವನ್ನು ಬಿಜೆಪಿಯವರು ಹೆಮ್ಮೆಯ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅರುಣಾಚಲ ಪ್ರದೇಶದ ಸೇಲಾ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿಯವರೇ ಉದ್ಘಾಟಿಸಿದ್ದರು. ಕಾಶ್ಮೀರದ ಸುರಂಗಗಳನ್ನು ಬಿಜೆಪಿಯವರು ಹೊಗಳುತ್ತಾರೆ. ಬೇರೆ ರಾಜ್ಯಗಳಲ್ಲಿ ಸುರಂಗವು ಅಭಿವೃದ್ಧಿ ಆದರೆ, ಬೆಂಗಳೂರಿನಲ್ಲಿ ಪರಿಸರ ವಿರೋಧಿ ಹೇಗೆ ಆಗುತ್ತದೆ. ಜನರಿಗೆ ಸಂಚಾರ ದಟ್ಟಣೆಯಿಂದ ಮುಕ್ತಿ ಬೇಕಿದೆ. ನಿಮ್ಮ ರಾಜಕೀಯದ ಅಡ್ಡಿ ಆತಂಕಗಳು ಅವರಿಗೆ ಬೇಡ’ ಎಂದು ತಿಳಿಸಿದ್ದಾರೆ.

ಲಾಲ್ಬಾಗ್ಗೆ ನಿಮ್ಮ ಪರಿಸರ ಪ್ರೇಮ ಸೀಮಿತವಾಗಿದೆ. ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ನಿಮ್ಮ ಅಧಿಕಾರದ ಅವಧಿಯಲ್ಲಿ ಎಷ್ಟು ಅನುದಾನ ನೀಡಿದ್ದೀರಿ? ಅಧಿಕಾರ ಇದ್ದಾಗ ನಿಮಗೆ ಪರಿಸರದ ಬಗ್ಗೆ ಎಷ್ಟು ಕಾಳಜಿ ಇತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.