ಬೆಂಗಳೂರು: ‘ರಾಜ್ಯದಲ್ಲಿ ಪೊಲೀಸ್ ಇಲಾಖೆಯೇ ರಿಯಲ್ ಎಸ್ಟೇಟ್ ಕಚೇರಿಯಾಗಿದ್ದು, ಗೃಹ ಇಲಾಖೆ ಒಂದು ರೀತಿ ಸತ್ತಿದೆ. ಗೃಹ ಸಚಿವರನ್ನು ವಜಾ ಮಾಡಬೇಕು’ ಎಂದು ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ್ ಆಗ್ರಹಿಸಿದರು.

‘ರಾಜ್ಯದ ಗೃಹ ಸಚಿವರಿಗೆ ತಮ್ಮ ಜವಾಬ್ದಾರಿ ಏನೆಂದೇ ಅರ್ಥ ಆಗಿಲ್ಲ. ಕೇವಲ ‘ಝೀರೊ ಟ್ರಾಫಿಕ್’ನಲ್ಲಿ ಓಡಾಡುವುದೇ ಗೃಹ ಸಚಿವರ ಜವಾಬ್ದಾರಿ ಅಂದುಕೊಂಡಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ದೂರಿದರು.

‘ಉನ್ನತ ಅಧಿಕಾರಿ ಕಚೇರಿಯಲ್ಲಿ ಸಮವಸ್ತ್ರದಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸುವ ಮಟ್ಟಕ್ಕೆ ಪೊಲೀಸ್ ಇಲಾಖೆ ಬಂದು ನಿಂತಿದೆ ಎಂದರೆ, ಗೃಹ ಸಚಿವರು ತಮ್ಮ ಹಿಡಿತ ಇಟ್ಟುಕೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಪೊಲೀಸ್ ಅಧಿಕಾರಿಗಳಿಗೆ ಜವಾಬ್ದಾರಿಯೇ ಇಲ್ಲವಾಗಿದೆ. ಇದು ಸಿ.ಡಿ. ಮಾಡುವ ಸರ್ಕಾರವಾಗಿದೆ’ ಎಂದು ಆರೋಪಿಸಿದರು.

‘ಒಬ್ಬರ ಮೇಲೆ ಇನ್ನೊಬ್ಬರು ಸಿ.ಡಿ. ಮಾಡುವುದು, ಸಿ.ಡಿ. ಬಿಡುಗಡೆ ಮಾಡುವುದು, ಸಿ.ಡಿ. ಇದೆ ಎಂದು ಹೆದರಿಸುವುದು, ಮಂತ್ರಿಗಳ ರಾಜೀನಾಮೆ ಪಡೆಯುವುದು, ಅಧಿಕಾರಿ ವಿರುದ್ಧ ಮಹಿಳೆ ಮೂಲಕ ಸಿ.ಡಿ. ಮಾಡಿಸಿ ಬಿಡುಗಡೆ ಮಾಡಿಸುವುದು ನಡೆದಿದೆ. ರಾಜಣ್ಣನವರ ರಾಜೀನಾಮೆ ತೆಗೆದುಕೊಳ್ಳಲು ಸಿ.ಡಿ. ಭಯ ಹುಟ್ಟಿಸಿದ್ದರು. ಈ ಸರ್ಕಾರಕ್ಕೆ ಜವಾಬ್ದಾರಿ ಏನೆಂದೇ ಅರ್ಥ ಆಗುತ್ತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.