ಬೆಂಗಳೂರು: ಸಚಿವರಾದ ಎಚ್.ಕೆ. ಪಾಟೀಲ, ಪ್ರಿಯಾಂಕ್ ಖರ್ಗೆ ಆಣತಿಯಂತೆ ಲೋಕಭವನ ಮತ್ತು ಆರ್ಎಸ್ಎಸ್ನ ಕಚೇರಿ ಕೇಶವಕೃಪಾದ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಆಗ್ರಹಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಬಿಜೆಪಿ ಸದಸ್ಯರು ಕದ್ದಾಲಿಕೆ ವಿಷಯ ಪ್ರಸ್ತಾಪಿಸಿದರು.

‘ವಂದನೆಯ ಬದಲಿಗೆ ಖಂಡನಾ ನಿರ್ಣಯದ ಮೂಲಕ ರಾಜ್ಯಪಾಲರಿಗೆ ಅಗೌರವ ತೋರಿಸಿದ್ದಾರೆ. ಆದ್ದರಿಂದ ಈ ಕುರಿತು ಸರ್ಕಾರ ಕ್ಷಮೆ ಯಾಚಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಪಟ್ಟು ಹಿಡಿದರು. ಬಿಜೆಪಿ ಸದಸ್ಯರು ಧ್ವನಿಗೂಡಿಸಿದರು.

ಆಗ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು, ‘ದೆಹಲಿಯಿಂದ ಬರುವ ದೂರವಾಣಿ ಕರೆಗಳ ನಿರ್ದೇಶನದಂತೆಯೇ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಪೂರ್ತಿ ಭಾಷಣ ಓದಲಿಲ್ಲ’ ಎಂದರು.

ಅವರ ಮಾತನ್ನೇ ಗಟ್ಟಿಯಾಗಿ ಹಿಡಿದುಕೊಂಡ ಬಿಜೆಪಿ ಸದಸ್ಯರು, ‘ಹಾಗಿದ್ದರೆ ನೀವು ಲೋಕಭವನದ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡುತ್ತಿದ್ದೀರಾ? ದೆಹಲಿಯಿಂದ ಎಷ್ಟು ಕರೆಗಳು ಬಂದಿವೆ ಮತ್ತು ಯಾವ ನಿರ್ದೇಶನ ನೀಡಿದ್ದಾರೆ ಎಂಬುದು ನಿಮಗೆ ಗೊತ್ತಿರಬೇಕು. ಅವುಗಳ ವಿವರಗಳನ್ನು ಬಹಿರಂಗಪಡಿಸಿ ಎಂದು ಪಟ್ಟು ಹಿಡಿದರು.

‘ಆದೇಶಿಸಿದ್ದು ಯಾರು?’

ರಾಜ್ಯಪಾಲರಿಗೆ ದೆಹಲಿಯಿಂದ ಎಷ್ಟು ಬಾರಿ ಕರೆಗಳು ಬಂದಿವೆ? ಪದೇ ಪದೇ ನೀವು ಕರೆ ಬಂದಿದೆ ಎಂದು ಹೇಳುತ್ತೀರಿ, ಹಾಗಿದ್ದರೆ ಯಾರ ನಿರ್ದೇಶನದ ಮೇರೆಗೆ ನೀವು ದೂರವಾಣಿ ಕದ್ದಾಲಿಕೆ ಮಾಡಿಸುತ್ತಿದ್ದೀರಿ? ‘ಆಲ್ವೇಸ್ ರೆಸ್ಪಾನ್ಸಿಬಲ್ ಪರ್ಸನ್ಸ್ ಗೇವ್ ಇರೆಸ್ಪಾನ್ಸಿ ಬಲ್ ಸ್ಟೇಟ್ಮೆಂಟ್’. ಇದು ಎಚ್.ಕೆ.ಪಾಟೀಲ ಅವರಿಗೆ ಅನ್ವಯ. ನಿಮ್ಮ (ಪಾಟೀಲ) ಮಾತುಗಳಲ್ಲಿ ತೂಕ ಇರಬೇಕು. ಆದರೆ, ಕೆಟ್ಟ ಮೇಲ್ಪಂಕ್ತಿ ಹಾಕುತ್ತಿದ್ದೀರಿ.

– ಎಸ್. ಸುರೇಶ್ ಕುಮಾರ್, ಬಿಜೆಪಿ

‘ನಮ್ಮ ಕರೆಗಳನ್ನೂ ಕದ್ದಾಲಿಕೆ ಮಾಡುತ್ತಿದ್ದೀರಾ?’

ದೆಹಲಿಯಿಂದ ಲೋಕಭವನಕ್ಕೆ ಬರುವ ದೂರವಾಣಿ ಕರೆ ಪ್ರಕಾರ ರಾಜ್ಯಪಾಲರು ನಡೆದುಕೊಳ್ಳುತ್ತಾರೆ ಎಂದು ಎಚ್.ಕೆ.ಪಾಟೀಲ ಹೇಳಿದ್ದಾರೆ. ಅಂದರೆ ದೂರವಾಣಿ ಕದ್ದಾಲಿಕೆ ನಡೆಯುತ್ತಿದೆ ಎಂದರ್ಥ. ಇಲ್ಲವೆಂದರೆ ಅವರಿಗೆ ಈ ವಿಷಯ ಹೇಗೆ ಗೊತ್ತಾಗುತ್ತದೆ?

ಪ್ರಿಯಾಂಕ್ ಖರ್ಗೆ ಅವರೂ ಆರ್ಎಸ್ಎಸ್ ಕಚೇರಿಯಿಂದ ಲೋಕಭವನಕ್ಕೆ ಕರೆ ಬರುತ್ತಿದೆ ಎಂದು ಆರೋಪಿಸಿದ್ದಾರೆ. ಅಂದರೆ ಆರ್ಎಸ್ಎಸ್ ಕಚೇರಿ ದೂರವಾಣಿ ಕೂಡ ‘ಟ್ಯಾಪ್’ ಆಗುತ್ತಿದೆ. ಇದು ‘ಫೋನ್ ಟ್ಯಾಪಿಂಗ್’ ಸರ್ಕಾರವೇ? ನಮ್ಮ ‘ಫೋನ್ ಕೂಡ ಟ್ಯಾಪ್’ ಮಾಡಲಾಗುತ್ತಿದೆಯೇ? ರಾಮಕೃಷ್ಣ ಹೆಗಡೆ ಸರ್ಕಾರ ದೂರವಾಣಿ ಕದ್ದಾಲಿಕೆಯಿಂದ ಬಿದ್ದು ಹೋಗಿತ್ತು. ಈ ಸರ್ಕಾರ ಕೂಡ ದೂರವಾಣಿ ಕದ್ದಾಲಿಕೆಯಿಂದ ಬಿದ್ದು ಹೋಗುತ್ತದೆ.

ರಾಜ್ಯಪಾಲರಿಂದಲೇ ಪ್ರಮಾಣ ಸ್ವೀಕರಿಸಿರುವ ಕಾನೂನು ಸಚಿವರು ಈಗ ಅವರ ವಿರುದ್ಧವೇ ಮಾತನಾಡುತ್ತಾರೆ. ಸಚಿವರು ಗೋಪ್ಯತೆ ಕಾಪಾಡಬೇಕು. ಅವರು ಸಂಸದೀಯ ವ್ಯವಹಾರಗಳ ಸಚಿವರಾಗಿರುವುದೇ ನಮಗೆ ಅಗೌರವ.

– ಆರ್.ಅಶೋಕ, ವಿರೋಧ ಪಕ್ಷದ ನಾಯಕ

‘ಕದ್ದಾಲಿಕೆಗೆ ಸಚಿವರ ಷಡ್ಯಂತ್ರ’

ರಾಜ್ಯಪಾಲರು ಓಡಿಹೋದರು ಎಂದು ಸಚಿವ ಎಚ್.ಕೆ.ಪಾಟೀಲರು ಹೇಳಿದ್ದರು. ಇಲ್ಲಿ ನರೇಗಾ ಕುರಿತೇ ಇವೆಲ್ಲಾ ನಡೆಯುತ್ತಿದೆ. ಸಂಸತ್ತಿನಲ್ಲಿ ನರೇಗಾ ಕುರಿತು ಚರ್ಚೆ ನಡೆಯುವಾಗ ಅದರಲ್ಲಿ ಭಾಗವಹಿಸದೇ ರಾಹುಲ್ಗಾಂಧಿ ವಿದೇಶಕ್ಕೆ ಓಡಿ ಹೋಗಿದ್ದರು.

ದೆಹಲಿಯಿಂದ ಲೋಕಭವನಕ್ಕೆ ಕರೆ ಬಂದಿದ್ದದ್ದಕ್ಕೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಕಾನೂನು ಮಂತ್ರಿ ಮತ್ತು ಐಟಿ ಸಚಿವರು ಸೇರಿ ಷಡ್ಯಂತ್ರ ಮಾಡಿ ಕದ್ದಾಲಿಕೆ ಮಾಡಿಸುತ್ತಿದ್ದಾರೆ.

– ವಿ.ಸುನಿಲ್ಕುಮಾರ್, ಬಿಜೆಪಿ

‘ಯಾರ ಕರೆಯನ್ನೂ ಕದ್ದಾಲಿಸಿಲ್ಲ’

ನಾವು ಯಾರ ಕರೆಯನ್ನೂ ಕದ್ದಾಲಿಕೆ ಮಾಡಿಲ್ಲ. ವಿರೋಧ ಪಕ್ಷದವರ ಕರೆಗಳನ್ನೂ ಧ್ವನಿಮುದ್ರಿಸಿಕೊಂಡಿಲ್ಲ. ಹೈಕಮಾಂಡ್ನಿಂದ ರಾಜ್ಯಪಾಲರಿಗೆ ಸೂಚನೆ ಬಂದಿರಬಹುದೆಂದು ಎಚ್.ಕೆ. ಪಾಟೀಲರು ಹೇಳಿರಬಹುದು. ಇದನ್ನು ದೊಡ್ಡ ವಿಚಾರ ಮಾಡಿಕೊಂಡು ಮಾತನಾಡುವುದು ಬೇಡ. ರಾಜ್ಯಪಾಲರ ಭಾಷಣದ ಮೇಲೆ ಮಾತನಾಡುವುದು ಬಿಟ್ಟು ಕಾಲಹರಣ ಮಾಡುತ್ತಿದ್ದೀರಿ. ಬೇಕಾದರೆ ತನಿಖೆ ನಡೆಸೋಣ.

– ಸಿದ್ದರಾಮಯ್ಯ, ಮುಖ್ಯಮಂತ್ರಿ

‘ರಾಜ್ಯಪಾಲರಿಗೆ ಪುರಸೊತ್ತು ಇರಲಿಲ್ಲ’

ರಾಜ್ಯಪಾಲರು ರಾಷ್ಟ್ರಗೀತೆ ಮಾಡಿದ ಅಪಮಾನದ ಬಗ್ಗೆ ಚರ್ಚೆ ಆಗಬಾರದೇ? ರಾಜ್ಯಪಾಲರಿಗೆ ಅದು ಗೊತ್ತಾಗಲಿಲ್ಲ ಎನ್ನುವುದು ಸರಿಯಲ್ಲ. ಅಂದಿನ ಕಾರ್ಯಸೂಚಿ ಪಟ್ಟಿಯನ್ನು ಸರ್ಕಾರ ವಿವರವಾಗಿಯೇ ನೀಡಿದೆ.

ರಾಹುಲ್ ಗಾಂಧಿ ಓಡಿ ಹೋದರು ಎನ್ನುತ್ತೀರಿ. ಪ್ರಧಾನಿಯವರು ಕಳೆದ 12 ವರ್ಷಗಳಲ್ಲಿ ಒಂದು ಪತ್ರಿಕಾಗೋಷ್ಠಿಯನ್ನು ಮಾಡಿಲ್ಲ. ಅವರಿಗೆ ಪತ್ರಕರ್ತರನ್ನು ಕಂಡರೆ ಹೆದರಿಕೆ. ಅದಕ್ಕಾಗಿ ಪತ್ರಿಕಾಗೋಷ್ಠಿ ಮಾಡುತ್ತಿಲ್ಲ.

ರಾಜ್ಯಪಾಲರಿಗೆ ದೆಹಲಿಯಿಂದ ಮಾತ್ರವಲ್ಲ ಕೇಶವಕೃಪಾದಿಂದಲೂ
ಕರೆಗಳು ಬರುತ್ತವೆ. ದೆಹಲಿ ಮತ್ತು ಕೇಶವಕೃಪಾ ಏನು ನಿರ್ದೇಶನ ನೀಡುತ್ತವೆಯೋ ಅದೇ ಪ್ರಕಾರ ನಡೆದುಕೊಳ್ಳುತ್ತಾರೆ.

– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ

‘ಸಭಾಪತಿ ಹೇಳಿದರೂ ನಿಲ್ಲದ ರಾಜ್ಯಪಾಲರು’

ರಾಷ್ಟ್ರಗೀತೆ ಇದೆ, ಹೋಗಬೇಡಿ ಎಂದು ಸಭಾಪತಿ ಬಸವರಾಜ ಹೊರಟ್ಟಿಯವರು ರಾಜ್ಯಪಾಲರಿಗೆ ಹೇಳಿದರೂ ಅವರು ನಿಲ್ಲಲಿಲ್ಲ. ಇದನ್ನು ಸಭಾಪತಿಯವರು ನಿಮ್ಮ ಪಕ್ಷದ ನಾಯಕರ ಮುಂದೆಯೇ ನನಗೆ ಹೇಳಿದ್ದಾರೆ. ಹೀಗಾಗಿ, ರಾಜ್ಯಪಾಲರಿಗೆ ಮಾಹಿತಿ ಇರಲಿಲ್ಲ ಎಂದು ನೀವು ಹೇಳುವುದರಲ್ಲಿ ಸತ್ಯಾಂಶವಿಲ್ಲ. ರಾಷ್ಟ್ರಗೀತೆ ಬಿಟ್ಟು ಹೋಗುವುದು ಸರಿಯೇ? ಅವರು ಬಿಟ್ಟು ಹೋಗಿದ್ದರ ಕುರಿತು ಇಲ್ಲಿ ಚರ್ಚೆ ಆಗಬೇಕು. ರಾಷ್ಟ್ರಗೀತೆ ಮೊಳಗುವವರೆಗೆ ನಿಲ್ಲದೇ ಹೋಗಿದ್ದು ಸಂವಿಧಾನದ ಉಲ್ಲಂಘನೆ.

ರಾಜ್ಯಪಾಲರಿಗೆ ದೆಹಲಿಯಿಂದ ಕರೆ ಬರುತ್ತಿರುವ ಬಗ್ಗೆ ಒಂದು ವಾರದ ಹಿಂದೆಯೇ ಹೇಳಿದ್ದೇವೆ. ದೂರವಾಣಿ ಕದ್ದಾಲಿಕೆ ಆಗಿದ್ದರೆ ಕೇಂದ್ರ ಗೃಹ ಇಲಾಖೆ ಒಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಬೇಕಿತ್ತು. ಈವರೆಗೂ ಏಕೆ ಬಿಡುಗಡೆ ಮಾಡಿಲ್ಲ? ಯಾರ ಮೇಲೆ ಆಪಾದನೆ ಬಂದಿದೆಯೋ ಅವರೇ ಉತ್ತರ ನೀಡಬೇಕು. ಅಂದರೆ ಕೇಂದ್ರವೇ ಇದಕ್ಕೆ ಉತ್ತರ ನೀಡಬೇಕು.

ಕದ್ದಾಲಿಕೆ ಬಗ್ಗೆ ನೀವು ಕೇಳಿದರೆ, ನಾವು ತನಿಖೆಗೆ ವಹಿಸುತ್ತೇವೆ.

– ಎಚ್.ಕೆ.ಪಾಟೀಲ, ಕಾನೂನು ಮತ್ತು ಸಂಸದೀಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.