ರಾಜ್ಯದಲ್ಲಿ ತುರ್ತುಪರಿಸ್ಥಿತಿ ಹೇರಿಕೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದೆ ಜಂಗಲ್‌ರಾಜ್ ಆಗಿರುವುದರ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ವಿಧಾನಸಭೆಯಲ್ಲಿ ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ. ಕಣ್ಣು ಮಿಟುಕಿಸಿದರೆ ಕೈ ತೋರಿಸಿದರೆ ಬಂಧನ ಮಾಡುವಂತಹ ಕಾನೂನು ತರಲು ಮುಂದಾಗಿದ್ದಾರೆ. 1975 ರಲ್ಲಿ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದ ಮಾದರಿಯಲ್ಲೇ ಸಿದ್ದರಾಮಯ್ಯ ತುರ್ತುಪರಿಸ್ಥಿತಿ ಹೇರುತ್ತಿದ್ದಾರೆ
ಆರ್.ಅಶೋಕ ವಿರೋಧಪಕ್ಷದ ನಾಯಕ ವಿಧಾನಸಭೆ
ಕೊಲೆ ಬೆದರಿಕೆ ಹಾಕಿದ ಶಾಸಕನನ್ನು ಏಕೆ ಬಂಧಿಸಿಲ್ಲ? ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ರಾಜಶೇಖರ್ ಎಂಬ ವ್ಯಕ್ತಿಯನ್ನು ಅವರದೇ ಪಕ್ಷದ ಶಾಸಕ ಭರತ್ ರೆಡ್ಡಿಯವರ ಗನ್‌ಮ್ಯಾನ್‌ಗಳು ಗುಂಡು ಹಾರಿಸಿ ಕೊಂದಿದ್ದಾರೆ. ಆದರೆ ಈವರೆಗೂ ಶಾಸಕ ಮತ್ತು ಅವರ ಗನ್‌ಮ್ಯಾನ್‌ಗಳನ್ನು ಬಂಧಿಸಿಲ್ಲ. 5 ನಿಮಿಷದಲ್ಲಿ ಜನಾರ್ದನ ರೆಡ್ಡಿ ಮನೆ ಸುಟ್ಟುಬಿಡುತ್ತೇನೆ ಎಂದು ಭರತ್ ರೆಡ್ಡಿ ಹೇಳಿದರೂ ಕ್ರಮ ತೆಗೆದುಕೊಳ್ಳಲಿಲ್ಲ. ಇವತ್ತಲ್ಲ ನಾಳೆ ಅವರನ್ನು ಮುಗಿಸುವ ತನಕ ನಿದ್ದೆ ಮಾಡುವುದಿಲ್ಲ ಎಂದು ಹೇಳಿದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದು ದ್ವೇಷ ಭಾಷಣ ಅಲ್ಲವೇ? ಶಾಸಕನ ವಿರುದ್ಧ ಮೊಕದ್ದಮೆ ಏಕೆ ದಾಖಲಿಸಿಲ್ಲ?