ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾದ ಸಿದ್ದರಾಮಯ್ಯ: ಬಿ.ಎಲ್‌. ಶಂಕರ್‌

Published 4 ನವೆಂಬರ್ 2023, 15:32 IST
Last Updated 4 ನವೆಂಬರ್ 2023, 15:32 IST
ಅಕ್ಷರ ಗಾತ್ರ

ಬೆಂಗಳೂರು: ಮೂಲತಃ ಸಮಾಜವಾದಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧ್ವನಿ ಇಂದು ಬದಲಾಗಿದೆ. ಸುತ್ತಲೂ ಇರುವವರಿಂದ ಅವರು ಪ್ರಭಾವಿತರಾಗಿರಬಹುದು ಎಂದು ಕಾಂಗ್ರೆಸ್‌ ನಾಯಕ ಬಿ.ಎಲ್‌.ಶಂಕರ್ ಹೇಳಿದರು.

ಹಿಂದ್‌ ಮಜ್ದೂರ್ ಕಿಸಾನ್‌ ಪಂಚಾಯತ್‌ (ಎಚ್‌ಎಂಕೆಪಿ) ಅಧ್ಯಕ್ಷ ಮೈಕಲ್‌ ಫರ್ನಾಂಡೀಸ್‌ ಅವರ ಜನ್ಮದಿನದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ‘ಮೈಕಲ್‌–90’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರೈತ ನಾಯಕ ಎಂ.ಡಿ. ನಂಜುನಂಡಸ್ವಾಮಿ, ಫರ್ನಾಂಡಿಸ್‌ ಅವರ ಗರಡಿಯಲ್ಲಿ ಬೆಳೆದ ಸಿದ್ದರಾಮಯ್ಯನವರು ಸಮಾಜವಾದಿ ಹಿನ್ನೆಲೆಯಲ್ಲೇ ರಾಜಕೀಯ ನೆಲೆ ಕಂಡುಕೊಂಡವರು. ಈಗ ಅವರ ಮಾತು ಮೊದಲಿನಂತಿಲ್ಲ. ರಾಜಕೀಯ ಎಲ್ಲವನ್ನೂ ಕಲಿಸಿದೆ. ಸ್ಪಂದನೆ ಇಲ್ಲದ ಸ್ಥಿತಿಗೆ ತಲುಪಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT