ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ನಿಗಮಗಳು ಮತ್ತು ಕಂಪನಿಗಳಿಗೆ ಹತ್ತು ಮಂದಿ ನಿರ್ದೇಶಕರನ್ನು ನೇಮಕ ಮಾಡಿ ಗುರುವಾರ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನಿರ್ದೇಶಕರನ್ನಾಗಿ ಬೆಂಗಳೂರಿನ ಗೋವಿಂದರಾಜನಗರ ನಿವಾಸಿ ಪ್ರಶಾಂತ್ ಮಾಕನೂರ್ ಮತ್ತು ಧಾರವಾಡ ಜಿಲ್ಲೆಯ ಗುಲಗಂಜಿಕೊಪ್ಪದ ಹೊಸ ಓಣಿ ನಿವಾಸಿ ಮಹಾದೇವ ಶಿವಪ್ಪ ಅಗಳವಾಡಿ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ನಿರ್ದೇಶಕರ ಹುದ್ದೆಗೆ ಚಿಕ್ಕಬಳ್ಳಾಪುರ ನಿವಾಸಿ ಸಿ.ಪಿ. ಮಂಜುನಾಥ್ ಮತ್ತು ಬೆಂಗಳೂರಿನ ಕುಮಾರ ಪಾರ್ಕ್ ನಿವಾಸಿ ಶರತ್ ಚಂದ್ರ ಸನೀಲ್ ಬಿ. ಅವರನ್ನು ನೇಮಿಸಲಾಗಿದೆ.

ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ನಿರ್ದೇಶಕರ ಹುದ್ದೆಗೆ ಮಂಗಳೂರಿನ ಬಿಜೈ ನಿವಾಸಿ ಕಿಶೋರ್ ಬಿ.ಆರ್. ಮತ್ತು ಉಡುಪಿಯ ಕಟ್ಪಾಡಿ ನಿವಾಸಿ ಪ್ರವೀಣ್ ಹೆಗಡೆ ಅವರನ್ನು ನೇಮಕ ಮಾಡಲಾಗಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಮದ್ದೂರು ಹೋಬಳಿ ಚನ್ನಮಲ್ಲಿಪುರ ನಿವಾಸಿ ಗುರುಪ್ರಸಾದ್ ಬಿ ಅವರನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದ ನಿರ್ದೇಶಕರನ್ನಾಗಿ ಮತ್ತು ಬೆಳಗಾವಿಯ ರಾಮತೀರ್ಥ ನಗರದ ಅಣ್ಣಾಸಾಹೇಬ ಅಪ್ಪಾಸಾಹೇಬ ದೇಸಾಯಿ ಅವರನ್ನು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ನಿರ್ದೇಶಕರ ಹುದ್ದೆಗೆ ನೇಮಕ ಮಾಡಲಾಗಿದೆ.

ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿ ಜಯಪ್ರಕಾಶ್ ಶೆಟ್ಟಿ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊಂಡೇನಹಳ್ಳಿ ನಿವಾಸಿ ಮುರಳಿ ಕೆ.ಎಂ. ಅವರನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.