ಬೆಂಗಳೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ವಜಾ ಕುರಿತು ವಿಧಾನಪರಿಷತ್ನಲ್ಲಿ ಚರ್ಚೆ ನಡೆಯುವಾಗ ಬಿಜೆಪಿಯ ಎಚ್. ವಿಶ್ವನಾಥ್, ‘ಯಾವ ಪಕ್ಷವೇ ಇರಲಿ. ವರಿಷ್ಠರನ್ನು ಟೀಕೆ ಮಾಡಿದರೆ ಅವರ ಕಥೆ ಮುಗಿದಂತೆ. ಕಾಂಗ್ರೆಸ್ ನೇತೃತ್ವದ ಸರ್ಕಾರವೂ ಹೌದಪ್ಪಗಳ ಸರ್ಕಾರ ಆಗಿದೆ. ಅಂದು ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿ ಅಪರೇಷನ್ ಕಮಲ ಮಾಡಿತ್ತು. ನೀವೇ ‘ಬಾಂಬೆ ಬಾಯ್ಸ್’ ಎಂದು ಕರೆದಿದ್ರಿ’ ಎಂದರು.

ಆಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ನ ಪುಟ್ಟಣ್ಣ, ‘ಬಾಂಬೆ ಬಾಯ್ಸ್ ಪುಸ್ತಕ ಯಾವಾಗ ಪ್ರಕಟಿಸುವಿರಿ’ ಎಂದರು. ‘ಈಗಾಗಲೇ ಬರೆದಿಟ್ಟಿರುವೆ. ಮೂರೂ ಪಕ್ಷಗಳ ನಾಯಕರು ಬಿಡುಗಡೆ ಮಾಡಬೇಡಿ ಎಂದು ದುಂಬಾಲು ಬಿದ್ದಿದ್ದಾರೆ’ ಎಂದು ವಿಶ್ವನಾಥ್ ಪ್ರತಿಕ್ರಿಯಿಸಿದರು.

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ‘ಒಳ್ಳೆಯ ಪ್ರಕಾಶಕರನ್ನು ಹುಡುಕಿ ಕೊಡುತ್ತೇನೆ. ಕೃತಿ ಬಿಡುಗಡೆ ಮಾಡಿ, ಸಾಕಷ್ಟು ಕೃತಿ ಮಾರಾಟವಾಗುತ್ತವೆ’ ಎಂದು ನಗೆ ಚಟಾಕಿ ಹಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.