ಬೆಂಗಳೂರು: ‘ಕೋವಿಡ್–19ಗೆ ಸಂಬಂಧಿಸಿದಂತೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಯಾವುದೇ ಹಗರಣ ನಡೆದಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಬಂದು ಖರೀದಿಗೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳನ್ನು ಪರಿಶೀಲಿಸಲಿ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ಜಗಜೀವನರಾಂ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಇರುವ ಜಗಜೀವನರಾಂ ಪ್ರತಿಮೆಗೆ ಸೋಮವಾರ ಮಾಲಾರ್ಪಣೆ ಮಾಡಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಯಾವುದೇ ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳದೇ ಹಲವು ದಿನಗಳಿಂದ ಸಿದ್ದರಾಮಯ್ಯ ಅನಾವಶ್ಯಕವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ಇಷ್ಟು ದಿನ ಅವರ ಟೀಕೆಗಳನ್ನು ಕೇಳಿಕೊಂಡು ಮೌನವಾಗಿದ್ದೆ. ಅವರು ವಿಧಾನಸೌಧಕ್ಕೆ ಬಂದು ಪರಿಶೀಲಿಸುವುದೇ ಆದರೆಅದಕ್ಕೆ ಅಗತ್ಯ ವ್ಯವಸ್ಥೆ ಮಾಡುತ್ತೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಖರೀದಿಯಲ್ಲಿ ಲೋಪದೋಷ ಆಗಿರುವುದು ಕಂಡು ಬಂದರೆ, ಅಧಿಕಾರಿಗಳಾಗಲಿ, ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದೇ ಬಿಡುವುದಿಲ್ಲ. ಸಿದ್ದರಾಮಯ್ಯ ವೃಥಾ ಆರೋಪಗಳನ್ನು ಮಾಡುವುದು ಬಿಟ್ಟು ಖುದ್ದಾಗಿ ಬಂದು ಎಲ್ಲ ಕಡತಗಳನ್ನು ನೋಡಲಿ’ ಎಂದು ಹೇಳಿದರು.

ಕೆಲಸ ಮಾಡಲು ಬಿಡಿ: ‘ಕೊರೊನಾದಿಂದಾಗಿ ನಾಡು ಸಂಕಷ್ಟದಲ್ಲಿದೆ, ಜನರು ಸಮಸ್ಯೆಗೆ ಸಿಲುಕಿದ್ದಾರೆ. ಕೊರೊನಾ ವಿರುದ್ಧ ಗೆಲುವು ಸಾಧಿಸಲು ಇದು ಕೆಲಸ ಮಾಡುವ ಸಮಯ. ನೀವು ನಾಡಿನ ಜನರಿಗಾಗಿ ಕೆಲಸ ಮಾಡಿ. ಇಲ್ಲ ನಮಗೆ ಕೆಲಸ ಮಾಡಲು ಬಿಡಿ. ನಿಮ್ಮಿಂದ ಇಷ್ಟು ಸಣ್ಣ ಮಟ್ಟದ ಸಹಕಾರವನ್ನು ಜನರ ಪರವಾಗಿ ಕೇಳುತ್ತಿದ್ದೇನೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.