ಬೆಂಗಳೂರು: ‘ನಮ್ಮ ಸಮುದಾಯದ 16 ಶಾಸಕರಿದ್ದೇವೆ. ಸಚಿವ ಸ್ಥಾನದಿಂದ ಇಬ್ಬರನ್ನು ಇಳಿಸಲಾಗಿದೆ. ಆ ಸ್ಥಾನಗಳನ್ನು ತುಂಬಲೇಬೇಕು’ ಎಂದು ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಆಗ್ರಹಿಸಿದರು.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ದೆಹಲಿಗೆ ಹೋಗುತ್ತೇನೆ. ಸಚಿವ ಸ್ಥಾನ ಕೇಳಲು ಅಲ್ಲ. ಬದಲಿಗೆ, ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಹೋಗುತ್ತೇನೆ. ಬಿಹಾರ ಚುನಾವಣೆಯ ಫಲಿತಾಂಶದ ನಂತರ ಹೈಕಮಾಂಡ್ ನನಗೆ ಸಮಯ ನೀಡಬೇಕು’ ಎಂದರು.

ಸಚಿವ ಸಂಪುಟಕ್ಕೆ ಮರಳುವ ಸಮಯ ಬಂದಿದೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ನನ್ನದು ಯಾವಾಗಲೂ ಒಳ್ಳೆಯ ಸಮಯವೇ. ಸಚಿವ ಸಂಪುಟಕ್ಕೆ ಮರಳುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆದರೆ ನಮ್ಮ ಸಮುದಾಯದವರಿಗೆ ಸಂಪುಟದಲ್ಲಿ ಸ್ಥಾನ ನೀಡಲೇಬೇಕು’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.