‘ದೇಶದ ಒಟ್ಟು ಭೂಪ್ರದೇಶದಲ್ಲಿ ವನ್ಯಜೀವಿ ಪ್ರದೇಶ ಇರುವುದು ಶೇ 4ರಷ್ಟು ಮಾತ್ರ. ಇಲ್ಲಿ ವನ್ಯಜೀವಿ ಸಂರಕ್ಷಣೆಗೆ ಆದ್ಯತೆ ನೀಡಬೇಕೆ ವಿನಃ ಪ್ರವಾಸೋದ್ಯಮಕ್ಕಲ್ಲ. ಪ್ರವಾಸೋದ್ಯಮ ಬೆಳೆಯಬೇಕು ಹಾಗೂ ಉದ್ಯೋಗಾವಕಾಶ ಸಿಗಬೇಕು ಎಂಬುದು ನಿಜ. ಆದರೆ, ಪರಿಸರ ಅಸಮತೋಲನ ಸೃಷ್ಟಿಸುವುದು ಸರಿಯಲ್ಲ. ಈಗಾಗಲೇ ಒತ್ತಡದಲ್ಲಿರುವ ಪಶ್ಚಿಮ ಘಟ್ಟಗಳ ಮೇಲೆ ಪುನಃ ಬಲ ಪ್ರಯೋಗ ಬೇಡ. ಬದಲಿಗೆ ಮಾನವ- ವನ್ಯಜೀವಿ ಸಂಘರ್ಷ ತಡೆಗೆ ದೀರ್ಘಾವಧಿ ಕ್ರಮಗಳಿಗೆ ಸರ್ಕಾರಗಳು ಅನುದಾನ ಒದಗಿಸುವುದು ಒಳಿತು‘ ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಅಭಿಪ್ರಾಯಪಡುತ್ತಾರೆ.
ರೋಪ್‌ವೇ ಯೋಜನೆಯು ಕೊಡಚಾದ್ರಿಗೆ ಪೂರಕವಲ್ಲ. ಪರಿಸರಕ್ಕೆ ಹಾನಿ ಉಂಟು ಮಾಡುವ ಈ ಯೋಜನೆಯನ್ನು ಕೈಬಿಡಬೇಕು
ಈಶವಿಠಲದಾಸ ಸ್ವಾಮೀಜಿ ಕೇಮಾರು ಗೌರವಾಧ್ಯಕ್ಷ, ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್