ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗೇಂದ್ರರನ್ನು ಕರೆದು ಮಾತನಾಡಿದ ತಕ್ಷಣ ರಾಜೀನಾಮೆ ಕೊಡಿ ಎಂದರ್ಥವಲ್ಲ: ಸಿಎಂ

Published 6 ಜೂನ್ 2024, 9:35 IST
Last Updated 6 ಜೂನ್ 2024, 9:35 IST
ಅಕ್ಷರ ಗಾತ್ರ

ಬೆಂಗಳೂರು: 'ಸಚಿವ ನಾಗೇಂದ್ರ ಅವರನ್ನು ಕರೆದು ಮಾತನಾಡಿದ ತಕ್ಷಣ ರಾಜೀನಾಮೆ ಕೊಡಿ ಎಂದು ಅಲ್ಲ' ಎಂದು‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಚಿವ ನಾಗೇಂದ್ರ ರಾಜೀನಾಮೆ ಕುರಿತು ಕೇಳಿದ ಪ್ರಶ್ನೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, 'ಕರೆದು ಮಾತಾಡಿದ ತಕ್ಷಣ ರಾಜೀನಾಮೆ ಅಂತ ಅಲ್ಲ. ತನಿಖೆ ಆಗಲಿ, ವರದಿ ಬರಲಿ' ಎಂದರು.

'ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ, ಪಾದಯಾತ್ರೆ ಮಾಡುವವರು ಮಾಡಲಿ' ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಕುರಿತ ತನಿಖೆಗೆ ಎಸ್ಐಟಿ ರಚನೆ ಆಗಿದೆ. ಎಸ್ಐಟಿ ಯವರು ತನಿಖೆ ಮಾಡುತ್ತಿದ್ದಾರೆ. ತನಿಖೆ ಮುಗಿಯಲಿ' ಎಂದರು.

ನಾಗೇಂದ್ರ ಅವರನ್ನು ಕರೆದು ಮಾತಾಡಿದ್ರಾ ಎಂಬ ಪ್ರಶ್ನೆಗೆ, 'ನಾನು ಎಲ್ಲ ಸಚಿವರನ್ನು ಕರೆದು ಮಾತಾಡ್ತೀನಿ. ನಾಗೇಂದ್ರ ಅವರ ಜೊತೆಗೂ ಮಾತಾಡಿದ್ದೇನೆ' ಎಂದರು.

ಹಾಗಿದ್ದರೆ‌ ರಾಜೀನಾಮೆಗೆ ಸೂಚನೆ ನೀಡಿದ್ದೀರಾ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡದೆ ತೆರಳಿದರು.

ಸ್ಚಯಂ ಪ್ರೇರಿತವಾಗಿ ನಾಗೇಂದ್ರ ರಾಜೀನಾಮೆಗೆ ಮುಂದಾಗಿದ್ದಾರೆಂದು ಡಿ.ಕೆ. ಶಿವಕುಕುಮಾರ್ ಹೇಳಿದ್ದಾರೆ ಎಂಬ ಪ್ರಶ್ನೆಗೆ, 'ಅದನ್ನು ಶಿವಕುಮಾರ್ ಅವರನ್ನೇ ಕೇಳಿ ಎಂದಷ್ಟೇ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT