ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಅರ್ಜಿ ಭರ್ತಿ: ಉಪನ್ಯಾಸಕರಿಗೆ ತರಬೇತಿ

Published 29 ಡಿಸೆಂಬರ್ 2023, 16:14 IST
Last Updated 29 ಡಿಸೆಂಬರ್ 2023, 16:14 IST
ಅಕ್ಷರ ಗಾತ್ರ

ಬೆಂಗಳೂರು: ಸಿಇಟಿಗೆ ಅರ್ಜಿಗಳನ್ನು ಭರ್ತಿ ಮಾಡುವಾಗ ಆಗುವ ತಪ್ಪುಗಳನ್ನು ನಿವಾರಿಸಲು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಪಿಯು ಉಪನ್ಯಾಸಕರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧಗೊಳಿಸುತ್ತಿದೆ.

ಗುರುವಾರ ನಡೆದ ‘ಸಿಇಟಿ ವಿದ್ಯಾರ್ಥಿಮಿತ್ರ ಮಾಸ್ಟರ್‌ ಟ್ರೈನರ್‌’ ತರಬೇತಿ ಕಾರ್ಯಕ್ರಮದ ಮೊದಲ ಹಂತದಲ್ಲಿ 250 ವಿಜ್ಞಾನ ಉಪನ್ಯಾಸಕರು ತರಬೇತಿ ಪಡೆದರು. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.

ತರಬೇತಿ ಪಡೆದವರು ಮುಂದಿನ ಹಂತದಲ್ಲಿ ತಮ್ಮ ಜಿಲ್ಲೆಯ ಇಬ್ಬರು ಉಪನ್ಯಾಸಕರಿಗೆ, ನಂತರ ಕಾಲೇಜಿನ‌ ವಿದ್ಯಾರ್ಥಿಗಳಿಗೆ  ಅರ್ಜಿ ತುಂಬುವ ಸರಿಯಾದ ವಿಧಾನ ಹೇಳಿಕೊಡಬೇಕು. ಸಿಬಿಎಸ್ಇ , ಐಸಿಎಸ್‌ಇ, ಐಜಿಎಸ್‌ಇ ಪಿಯು ಕಾಲೇಜುಗಳಲ್ಲಿನ ಉಪನ್ಯಾಸಕರಿಗೂ ತರಬೇತಿ ಕೂಡಬೇಕು. ಜ.10ರ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. 

ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಬಯಸಿ ಸಿಇಟಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡುವಾಗ ತಮ್ಮ ಹೆಸರು, ಆರ್‌ಡಿ ಸಂಖ್ಯೆ, ಪ್ರವರ್ಗ, ಜಾತಿ ಮತ್ತಿತರ ವಿವರಗಳನ್ನು ತಪ್ಪು ನಮೂದಿಸುತ್ತಾರೆ. ಇಂತಹ ದೋಷಗಳಿಗೆ ಸಿಇಟಿ ಸುಗಮ ಪ್ರಕ್ರಿಯೆಗೆ ತೊಡಕಾಗುತ್ತದೆ. ತಮ್ಮ ಇಚ್ಚೆಯ ಕೋರ್ಸ್‌ಗಳ ಆಯ್ಕೆಯೂ ಕೈ ತಪ್ಪುವ ಸಾಧ್ಯತೆ ಇರುತ್ತದೆ ಎಂದು ರಮ್ಯಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT