ಬೆಂಗಳೂರು: ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶ ಸಂಬಂಧ ಅರ್ಹ ಸಿಇಟಿ ರ‍್ಯಾಂಕ್ ಪಡೆದ ಅಭ್ಯರ್ಥಿಗಳಿಗೆ 8ರಂದು ನಿಗದಿಪಡಿಸಲಾಗಿದ್ದ ದಾಖಲಾತಿ ಪರಿಶೀಲನೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದೇ 10 ಮತ್ತು 14ಕ್ಕೆ ಮುಂದೂಡಿದೆ.

8ರಂದು ನಡೆಯಬೇಕಿದ್ದ ಎಂಬಿಎ, ಎಂಸಿಎ, ಎಂಇ, ಎಂ.ಟೆಕ್ ಕೋರ್ಸ್‌ಗಳ ಪಿಜಿಸಿಇಟಿ- 2021ರ ದಾಖಲಾತಿ ಪರಿಶೀಲನೆಯನ್ನು 10ಕ್ಕೆ ಮರು ನಿಗದಿಪಡಿಸಲಾಗಿದೆ. ಜ.8ರಂದು ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಿದ್ದ ಪಿಜಿಸಿಇಟಿ ಅಭ್ಯರ್ಥಿಗಳು, ಈಗಾಗಲೇ ಪ್ರಕಟಿಸಿರುವ ಕೇಂದ್ರಗಳಲ್ಲಿ ಹಾಜರಾಗಲು ಸೂಚಿಸಲಾಗಿದೆ.

ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸುಗಳ ಪ್ರವೇಶಕ್ಕೆ ಅರ್ಹ ಯು.ಜಿ ನೀಟ್ ಅಭ್ಯರ್ಥಿಗಳಿಗೆ ಇದೇ 8ಕ್ಕೆ ನಿಗದಿಯಾಗಿದ್ದ ದಾಖಲೆ ಪರಿಶೀಲನಾ ಪ್ರಕ್ರಿಯೆ 14ಕ್ಕೆ ಮುಂದೂಡಲಾಗಿದೆ. ಅಭ್ಯರ್ಥಿಗಳು ಬೆಂಗಳೂರಿನ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಪರಿಶೀಲನೆಗೆ ಹಾಜರಾಗಬಹುದು ಎಂದು ಕೆಇಎ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.