ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೈತ್ರಾ ಪ್ರಕರಣ | ಗಗನ್‌ಗೂ ನಮಗೂ ಸಂಬಂಧವಿಲ್ಲ: ಸಾಲುಮರದ ತಿಮ್ಮಕ್ಕ ಸ್ಪಷ್ಟನೆ

ಬೇಲೂರಿನ ಬಳ್ಳೂರಿನಲ್ಲಿ ಸಾಲುಮರದ ತಿಮ್ಮಕ್ಕ ಸ್ಪಷ್ಟನೆ
Published 17 ಸೆಪ್ಟೆಂಬರ್ 2023, 13:04 IST
Last Updated 17 ಸೆಪ್ಟೆಂಬರ್ 2023, 13:04 IST
ಅಕ್ಷರ ಗಾತ್ರ

ಬೇಲೂರು: ‘ಉದ್ಯಮಿ ಗೋಂವಿದ ಬಾಬು ಪೂಜಾರಿಗೆ ಕೋಟಿ ಮೊತ್ತ ವಂಚಿಸಿದ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಗಗನ್ ಕಡೂರ್‌ ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ’ ಎಂದು ಸಾಲುಮರದ ತಿಮ್ಮಕ್ಕ ಹೇಳಿದರು.

  ಬಳ್ಳೂರು ಗ್ರಾಮದಲ್ಲಿರುವ ತಮ ದತ್ತುಪುತ್ರ ಉಮೇಶ್ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಾಧ್ಯಮಗಳಲ್ಲಿ ನಮ್ಮ ಬಗ್ಗೆ ಏನೇನೋ ಸುದ್ದಿ ಬರ್ತಿದೆ, ನಾವು ಗಿಡ ನೆಡ್ತಾ, ಹೇಗೋ ಜೀವನ ಮಾಡ್ತಿದ್ದೇವೆ. ನಾವು ಸರ್ಕಾರಕ್ಕೆ ಹೆದರಿ ಬದುಕುವ ಜನ. ನಾವು ಅತಂಹ ವಿಚಾರಕ್ಕೆ, ಗಲಾಟೆಗೆ ಹೋಗುವವರಲ್ಲ.ಇದೆಲ್ಲಾ ನಂಗೆ ಏನೂ ಗೊತ್ತಾಗಲ್ಲ’ ಎಂದು ಹೇಳಿದರು.

ತಿಮ್ಮಕ್ಕ ಅವರ ದತ್ತು ಪುತ್ರ ಬಳ್ಳೂರು ಉಮೇಶ್ ಮಾತನಾಡಿ, ‘ನಾವು ಗಗನ್ ಕಡೂರು ಅವರ ಮದುವೆಗೆ ಹೋಗಿದ್ದು ನಿಜ. ಅವರು ಭಾರತೀಯ ಅಯ್ಯಪ್ಪ ಸೇವಾ ಸಮಿತಿಯ ಸದಸ್ಯ. ನಾನು ಅದರ ಅಧ್ಯಕ್ಷ. ಪ್ರತಿಷ್ಠಿತ ಸುದ್ದಿವಾಹಿನಿಯೊಂದು ಗಗನ್ ಅವರು ತಿಮ್ಮಕ್ಕ ಅವರ ಕಾರು ದುರ್ಬಳಕೆ ಮಾಡಿಕೊಂಡಿರುವ, ವಿಧಾನಸೌಧದ ಕೊಠಡಿಯನ್ನು ನವೀಕರಣ ಮಾಡಿಕೊಟ್ಟಿರುವ ಸಾಧ್ಯತೆ ಇದೆ ಎಂದು ಸುದ್ದಿ ಮಾಡುವಾಗ ಗಮನಿಸಿ ಸುದ್ದಿ ಮಾಡಬೇಕಿತ್ತು’ ಎಂದರು.

‘ದೇಶದಲ್ಲಿ ತಿಮ್ಮಕ್ಕ ಅವರ ಅಭಿಮಾನಿಗಳು ಕೊಟ್ಯಂತರ ಜನರಿದ್ದಾರೆ, ಅವರುಗ ಬಂದು ಪೋಟೊ ತೆಗೆಸಿಕೊಳ್ಳುತ್ತಾರೆ. ಮದುವೆಗೆ ಪ್ರೀತಿಯಿಂದ ಕರೆದಾಗ ಹೋಗಬೇಕಾಗುತ್ತದೆ. ಅದೇ ರೀತಿ ಗಗನ್ ಅವರ ಮದುವೆಗೂ ಹೋಗಿದ್ದೇವೆ ಅಷ್., ಅವರು ತಪ್ಪು ಮಾಡಿದ್ದರೆ ತಕ್ಕ ಶಿಕ್ಷೆಯಾಗಲಿ. ಆದರೆ ಇದರಲ್ಲಿ ನಮ್ಮ ಹೆಸರು ಪ್ರಸ್ತಾಪ ಮಾಡಿರುವುದು ತಪ್ಪು’ ಎಂದು ವಿವರಿಸಿದರು.

‘ತಿಮ್ಮಕ್ಕ ಅವರ ಕೊಠಡಿಯನ್ನು ನವೀಕರಣ ಮಾಡಲು ಗಗನ್ ಯಾರು? ನವೀಕರಣವನ್ನು ಸರ್ಕಾರ ಮಾಡಿಕೊಡುತ್ತದೆ. ಗಗನ್ ತಿಮ್ಮಕ್ಕ ಅವರ ಕಾರು ಬಳಸಿದರೆ ಅದಕ್ಕೆ ದಾಖಲೆ ಕೊಡಿ.‌ನಾವು ಸಮಾಜಕ್ಕಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಹೊರತು ಸಮಾಜಕ್ಕೆ ದ್ರೋಹ ಮಾಡುವುದಿಲ್ಲ. ಸಂಕಷ್ಟದ ದಿನಗಳಲ್ಲೇ ನಾವು ತಪ್ಪು ಮಾಡಿಲ್ಲ, ಈಗ ಸರ್ಕಾರ ನಮಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಗೌರವಿಸಿದೆ. ಇಡೀ ಸಮಾಜ ಗೌರವಿಸುತ್ತಿದೆ ಈಗ ತಪ್ಪು ಮಾಡುತ್ತಿವಾ ಎಂದು ಪ್ರಶ್ನಿಸಿದರು.

‘ಗಗನ್ ಜೊತೆ ಸಂಬಂಧ ಬೆಸೆದು ಸುದ್ದಿ ಮಾಡಿರುವ ಸುದ್ದಿ ವಾಹಿನಿಯ ವರದಿಗಾರನ ವಿರುದ್ಧ ಮಾನನಷ್ಟ ಮೂಕದ್ದಮೆ ಹೂಡಲಾಗುವುದು’ ಎಂದು ತಿಳಿಸಿದರು.

ತಿಮ್ಮಕ್ಕ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಸಿಕ್ಕಿರುವುದರಿಂದ ಅಸೂಯೆಹೊಂದಿದ ಕೆಲವರು ನಮಗೆ ಕಳಂಕ ತರುವ ಉದ್ದೇಶದಿಂದ ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಶ್ರೀಘ್ರದಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಗೃಹಸಚಿವ ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಈ ವಿಷಯದ ಬಗ್ಗೆ ಮಾತನಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT