ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ‘ಸ್ವತಂತ್ರ ಧರ್ಮ’ ಬೆಂಬಲಿಸುವ ಪಕ್ಷಕ್ಕೆ ಮತ: ಚನ್ನಬಸವಾನಂದ ಸ್ವಾಮೀಜಿ

ಚನ್ನಬಸವಾನಂದ ಸ್ವಾಮೀಜಿ ಹೇಳಿಕೆ
Last Updated 12 ಫೆಬ್ರುವರಿ 2023, 5:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಲಿಂಗಾಯತ ಸ್ವತಂತ್ರ ಧರ್ಮವಾಗಲು ಕೇಂದ್ರಕ್ಕೆ ಶಿಫಾರಸು ಸಲ್ಲಿಸುವುದಾಗಿ ಪ್ರಣಾಳಿಕೆಯಲ್ಲಿ ದಾಖಲಿಸುವ ಪಕ್ಷಕ್ಕೆ ಮತ ಹಾಕುತ್ತೇವೆ’ ಎಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ, ‘ವೀರಶೈವ ಲಿಂಗಾಯತರು ಮಹಾರಾಷ್ಟ್ರದಲ್ಲಿ ಹೋಗಿ ತಾವು ‘ಹಿಂದೂಗಳು’ ಎಂದು ಹೇಳಿಕೊಳ್ಳುತ್ತಾರೆ. ಆದರೆ ನಾವು ಹಿಂದೂಗಳಲ್ಲ’ ಹಿಂದೂ ಎಂಬುದು ಧರ್ಮ ಅಲ್ಲ, ಜೀವನಶೈಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ, ಪ್ರಧಾನಿ ಮೋದಿಯವರೂ ಹೇಳಿದ್ದಾರೆ. 500 ವರ್ಷಗಳ ಇತಿಹಾಸ ಇರುವ ಸಿಖ್ ಸಮಾಜ ಪ್ರತ್ಯೇಕ ಧರ್ಮ ಎನಿಸಿಕೊಂಡಿದೆ. ಜೈನರದ್ದೂ ಪ್ರತ್ಯೇಕ ಧರ್ಮ ಆಗಿರುವಾಗ 900 ವರ್ಷಗಳ ಹಿಂದಿನ ಲಿಂಗಾಯತ ಸಮುದಾಯ ಏಕೆ ಸ್ವತಂತ್ರ ಧರ್ಮ ಆಗಬಾರದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT