ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿಯ ಚೋರ್ಲಾ ಘಾಟ್ನಲ್ಲಿ ₹400 ಕೋಟಿ ನಗದು ಹೊತ್ತ ಎರಡು ಕಂಟೇನರ್ ಲೂಟಿ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಕೈಗೊಂಡ ಮಹಾರಾಷ್ಟ್ರದ ಎಸ್ಐಟಿಯವರು, ‘ಕಂಟೇನರ್ ಸಾಗಾಟ ಮತ್ತು ಕಳವು ನಡೆದಿದೆ ಎನ್ನುವುದಕ್ಕೆ ಪೂರಕ ಸಾಕ್ಷ್ಯ ಸಿಕ್ಕಿಲ್ಲ’ ಎಂದು ನಾಶಿಕ್ನ ಇಗತಪುರಿ ನ್ಯಾಯಾಲಯಕ್ಕೆ ಶನಿವಾರ ವರದಿ ಸಲ್ಲಿಸಿದ್ದಾರೆ.

‘ನಾನು ₹400 ಕೋಟಿ ನಗದು ಹೊತ್ತ ಕಂಟೇನರ್ ಕದ್ದಿದ್ದಾಗಿ ಪೊಲೀಸರಿಗೆ ತಿಳಿಸುವಂತೆ ಅಪಹರಣಕಾರರು ಬೆದರಿಕೆ ಹಾಕಿದ್ದಾರೆ’ ಎಂದು ನಾಸಿಕ್ನ ಸಂದೀಪ ಪಾಟೀಲ ಡಿ.17ರಂದು ನಾಸಿಕ್ನ ಘೋಟಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆಗಾಗಿ ಎಸ್ಐಟಿ ರಚನೆಯಾಗಿತ್ತು. ಏಳು ಮಂದಿ ಬಂಧಿಸಿ ಎಸ್ಐಟಿ ತನಿಖೆ ಕೈಗೊಂಡಿತ್ತು.

‘ಮಹಾರಾಷ್ಟ್ರದಲ್ಲಿ ನ್ಯಾಯ ಸಿಗದ ಕಾರಣ ದೂರುದಾರ ಸಂದೀಪ ಪಾಟೀಲ ಅವರು ರವಾನಿಸಿದ ಯಾವ ಪತ್ರವೂ ನನ್ನ ಕೈಸೇರಿಲ್ಲ’ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.