ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ.ಇಬ್ರಾಹಿಂ ಉಚ್ಚಾಟನೆ ಜೆಡಿಎಸ್‌ ಕಾರ್ಯಕರ್ತರಿಗೆ ಅವಮಾನ: ವಾಲದೊಡ್ಡಿ

Published 22 ಅಕ್ಟೋಬರ್ 2023, 11:27 IST
Last Updated 22 ಅಕ್ಟೋಬರ್ 2023, 11:27 IST
ಅಕ್ಷರ ಗಾತ್ರ

ಬೀದರ್‌: ‘ಸಿ.ಎಂ. ಇಬ್ರಾಹಿಂ ಅವರನ್ನು ಜೆಡಿಎಸ್‌ ಅಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಿರುವುದು ಖಂಡನಾರ್ಹ. ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ಹೀಗೆ ಮಾಡುವುದರ ಮೂಲಕ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೆ ಅವಮಾನ ಮಾಡಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ವಿಷ್ಣುವರ್ಧನ ವಾಲದೊಡ್ಡಿ ಹೇಳಿದರು.

ಇಬ್ರಾಹಿಂ ಅವರ ಉಚ್ಚಾಟನೆಗೂ ಮುನ್ನ ಪಕ್ಷದ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣ ನಾಚಿಕೆಗೇಡಿನ ಸಂಗತಿಯಾಗಿದೆ. ಯಾವುದೇ ಕಾರಣಕ್ಕೂ ಜೆಡಿಎಸ್‌, ಬಿಜೆಪಿ ಜೊತೆ ಮೈತ್ರಿಯಾದ್ರೆ ನಾವು ಪಕ್ಷದಲ್ಲಿ ಇರುವುದಿಲ್ಲ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಾಜಿ ಪ್ರಧಾನಿಯಾಗಿ ಕೆಲಸ ಮಾಡಿದ ದೇವೇಗೌಡರು, ಇಬ್ರಾಹಿಂ ಉಚ್ಚಾಟನೆಗೂ ಮುನ್ನ ಸ್ವಲ್ಪ ವಿಚಾರ ಮಾಡಬೇಕಿತ್ತು. ಜೆಡಿಎಸ್‌ ಅಂದರೆ ತಂದೆ–ಮಗನ ಪಕ್ಷ ಎಂದು ತಿಳಿದುಕೊಂಡಿದ್ದಾರೆ. ಪಕ್ಷಕ್ಕಾಗಿ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದನ್ನು ಮರೆತು ಹೋಗಿದ್ಧಾರೆ. ಇಬ್ರಾಹಿಂ ಅವರು ಬಸವ ತತ್ವ ಹಾಗೂ ಅಂಬೇಡ್ಕರ್ ಸಿದ್ದಾಂತಗಳನ್ನು ಅಳವಡಿಸಿಕೊಂಡು ಪ್ರತಿಯೊಂದು ಸಮಾಜದ ಜೊತೆಗೆ ಹೋಗುತ್ತಿದ್ದರು. ಕಾಂಗ್ರೆಸ್‌ನಲ್ಲಿ ಎಂಎಲ್‌ಸಿ ಆಗಿದ್ದವರನ್ನು ಜೆಡಿಎಸ್‌ಗೆ ಕರೆತಂದವರೇ ಗೌಡರ ಕುಟುಂಬದವರು. ಈಗ ಅವರ ವಿರುದ್ಧ ಕ್ರಮ ಕೈಗೊಂಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಕೇಳಿದರು.

[object Object]

ಕಾಶೆಂಪುರ್‌ ಪಶ್ಚತ್ತಾಪ ಪಡ್ತಾರೆ: ‘ಜೆಡಿಎಸ್‌ ಮುಖಂಡರೂ ಆದ ಮಾಜಿಸಚಿವ ಬಂಡೆಪ್ಪ ಕಾಶೆಂಪುರ್‌ ಅವರು ಈಗ ಒಂದುವೇಳೆ ಎಚ್‌.ಡಿ.ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ ತೆಗೆದುಕೊಂಡಿರುವ ನಿರ್ಧಾರದ ಪರವಾಗಿ ನಿಂತರೆ ಮುಂದೆ ಪಶ್ಚತ್ತಾಪ ಪಡ್ತಾರೆ. ಪಕ್ಷದ ಕಾರ್ಯಕರ್ತರು ಜೊತೆಗಿರದಿದ್ದರೆ ಕೊನೆಯ ವರೆಗೆ ಮಾಜಿಯಾಗಿಯೇ ಇರಬೇಕಾಗುತ್ತದೆ’ ಎಂದು ವಿಷ್ಣುವರ್ಧನ ವಾಲದೊಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT