ಬೆಂಗಳೂರು: 'ಹೊಸ ಶಿಕ್ಷಣ ನೀತಿಯಿಂದ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಅನುಕೂಲವಾಗಲಿದ್ದು, ಭವಿಷ್ಯದಲ್ಲಿ ಎಂಜಿನಿಯರಿಂಗ್ ಕಾಲೇಜುಗಳು ಜಾಗತಿಕ ಗುಣಮಟ್ಟ ಸಾಧಿಸಲಿವೆ’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಆವಿಷ್ಕಾರ್-2020’ ಕಾರ್ಯಕ್ರಮದಲ್ಲಿ ಆನ್‌ಲೈನ್ ಮೂಲಕ ಮಾತನಾಡಿದ ಅವರು, ‘ಉನ್ನತ ಶಿಕ್ಷಣದ ದಿಕ್ಕನ್ನು ಶಿಕ್ಷಣ ನೀತಿ ಬದಲಿಸಲಿದೆ. ಆರ್ಥಿಕವಾಗಿ ದುರ್ಬಲವಾಗಿರುವ ಕಾಲೇಜುಗಳ ಪುನಶ್ಚೇತನಕ್ಕೂ ಇದರಿಂದ ಅನುಕೂಲವಾಗಲಿದೆ. ಸಂಶೋಧನೆ ಮತ್ತು ಗುಣಮಟ್ಟದ ಬೋಧನೆಯ ದಿಕ್ಕಿನಲ್ಲಿ ಮುಂದಿನ ದಿನಗಳಲ್ಲಿ ಗಮನಾರ್ಹ ಬದಲಾವಣೆಗಳು ಗೋಚರವಾಗಲಿವೆ’ ಎಂದರು.

134 ಪ್ರಾಜೆಕ್ಟ್: ಮಹಿಳಾ ಸುರಕ್ಷತೆ, ಸ್ವಚ್ಛ ಭಾರತ, ಸ್ವಸ್ಥ್ಯ ಭಾರತ್, ಡಿಜಿಟಲ್ ಇಂಡಿಯಾ, ಗ್ರೀನ್ ಎನರ್ಜಿ, ಪರಿಸರ ರಕ್ಷಣೆ, ಕೃಷಿ ಸಲಕರಣೆಗಳು ಸೇರಿದಂತೆ ವಿವಿಧ ವಿಷಯಗಳ ಒಟ್ಟು 134 ಪ್ರಾಜೆಕ್ಟ್‌ಗಳನ್ನು ವಿದ್ಯಾರ್ಥಿಗಳು ‘ಆವಿಷ್ಕಾರ್–2020’ದಲ್ಲಿ ಮಂಡಿಸಿದ್ದು, ವಿಜೇತ ಪ್ರಾಜೆಕ್ಟ್‌ಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ಕ್ರಮವಾಗಿ ₹ 25 ಸಾವಿರ, ₹ 20 ಸಾವಿರ, ₹ 15 ಸಾವಿರ ನಗದು ನೀಡಲಾಯಿತು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.