ಕಾರವಾರ: ಕರಾವಳಿ ಉತ್ಸವದ ಅಂಗವಾಗಿ ಭಾನುವಾರ ಇಲ್ಲಿನ ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿ ಆಯೋಜಿಸಲಾಗಿದ್ದ ಕರಾವಳಿ ರನ್ ಮ್ಯಾರಥಾನ್ ನ ಪುರುಷರ ವಿಭಾಗದಲ್ಲಿ ಸೂಡಾನ್‌ನ ಸೈಮನ್ (ಪ್ರಥಮ) ಬಹುಮಾನ ಗೆದ್ದುಕೊಂಡರು.

ಕೀನ್ಯಾದ ಪೀಟರ್ (ದ್ವಿತೀಯ), ಬೆಂಗಳೂರಿನ ನಂಜುಡಪ್ಪ (ತೃತೀಯ) ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಮೈಸೂರಿನ ಅರ್ಚನಾ (ಪ್ರಥಮ), ಕಾರವಾರದ ಮೇಘ (ದ್ವಿತೀಯ) ಮತ್ತು ಕೀನ್ಯಾದ ನಾವೋಮಿ (ತೃತೀಯ) ಸ್ಥಾನ ತಮ್ಮದಾಗಿಸಿಕೊಂಡರು.

ಆದಿತ್ಯಾ ಬಿರ್ಲಾ ಗ್ರಾಸಿಂ ಇಂಡಸ್ಟ್ರೀಸ್ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದ್ದ ಮ್ಯಾರಾಥಾನ್ ಸ್ಪರ್ಧೆ ಮೂರು ವಿಭಾಗಗಳಲ್ಲಿ ನಡೆಯಿತು. 21 ಕಿ.ಮೀ., 10 ಕಿ.ಮೀ. ಮತ್ತು 3 ಕಿ.ಮೀ. ದೂರದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

10 ಕಿ.ಮೀ. ಪುರುಷರ ವಿಭಾಗದಲ್ಲಿ ಇಥಿಯೋಪಿಯಾದ ಐಸಾಕ್ (ಪ್ರಥಮ), ಕೀನ್ಯಾದ ಮಾರ್ಟಿನ್ (ದ್ವಿತೀಯ) ಮತ್ತು ಕಾರವಾರದ ಶಿವಾಜಿ (ತೃತೀಯ) ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ (ಪ್ರಥಮ), (ದ್ವಿತೀಯ) ಮತ್ತು (ತೃತೀಯ) ಸ್ಥಾನ ಪಡೆದರು.

3 ಕಿ.ಮೀ. ವಿಭಾಗದಲ್ಲಿ ಕಾರವಾರದ ಫೈರೋಜಾ, ಭವಾನಿ, ಪ್ರಿನ್ಸಿಪಲ್, ಆದಿತ್ಯಾ, ಶಿವನಾಗ, ಗಿಬ್ಸ್ ಅವರಿಗೆ ಬಹುಮಾನ ನೀಡಲಾಯಿತು.

ಎಲ್ಲ ವಿಭಾಗದ ವಿಜೇತರಿಗೆ ನಗದು ಬಹುಮಾನ, ಟ್ರೋಫಿಯನ್ನು ಇದೇ ವೇಳೆ ವಿತರಣೆ ಮಾಡಲಾಯಿತು.

ಸ್ಪರ್ಧೆಯಲ್ಲಿ ಭಾಗವಹಿಸಲು 1,200ಕ್ಕೂ ಅಧಿಕ ಸ್ಪರ್ಧಿಗಳು ತಮ್ಮ ಹೆಸರು ನೊಂದಾಯಿಸಿದ್ದರು. ಹೆಚ್ಚುವರಿಯಾಗಿ 300 ಸ್ಪರ್ಧಿಗಳು ಮ್ಯಾರಾಥಾನ್‌ನಲ್ಲಿ ಭಾಗವಹಿಸಿ ಕ್ರೀಡಾ ಸ್ಪೂರ್ತಿ ಮೆರೆದರು.

ಬೆಂಗಳೂರು ಬುಲ್ಸ್ ಕಬಡ್ಡಿ ತಂಡದ ತರಬೇತುದಾರ ಬಿ.ಸಿ.ರಮೇಶ್ ಸ್ಪರ್ಧಾಳುಗಳನ್ನು ಉತ್ತೇಜಿಸಿದರು.ಮ್ಯಾರಾಥಾನ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಉದ್ಘಾಟಿಸಿದರು.

ಆದಿತ್ಯಾ ಬಿರ್ಲಾ ಗ್ರಾಸಿಂ ಇಂಡಸ್ಟ್ರೀಸ್‌ನ ಘಟಕ ವ್ಯವಸ್ಥಾಪಕ ಪಿ.ಬಿ.ದೀಕ್ಷಿತ್, ಕೈಗಾ ಅಣು ವಿದ್ಯುತ್ ಸ್ಥಾವರದ ಸಾರ್ವಜನಿಕ ಜಾಗೃತಿ ಅಧಿಕಾರಿ ಎಂ.ಶೇಷಯ್ಯ, ಕರ್ನಾಟಕ ನೌಕಾವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್‌ಕೆ.ಜೆ. ಕುಮಾರ್, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್‌ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.