ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಬಾಕಿ ವೇತನ ಕೈತಪ್ಪುವ ಆತಂಕ: ಪ್ರಾಧ್ಯಾಪಕರ ಅಸಮಾಧಾನ

ಕಾಲೇಜು ಶಿಕ್ಷಣ ಇಲಾಖೆ ತಡೆ ಆದೇಶ l ಪ್ರಾಧ್ಯಾಪಕರ ಅಸಮಾಧಾನ
Last Updated 28 ಮಾರ್ಚ್ 2022, 19:44 IST
ಅಕ್ಷರ ಗಾತ್ರ

ಅಂಕೋಲಾ: ಅನುದಾನಿತ ಪದವಿ ಕಾಲೇಜುಗಳಲ್ಲಿ ಮುಂಬಡ್ತಿ ಹೊಂದಿದ ಪ್ರಾಧ್ಯಾಪಕರ ಸ್ಥಾನೀಕರಣ (ಪದೋನ್ನತಿ ಹಿಂಬಾಕಿ ವೇತನ)ಕ್ಕೆ ಹಣಕಾಸು ಇಲಾಖೆಯು ಬಿಡುಗಡೆ ಮಾಡಿದ್ದ ₹59 ಕೋಟಿಯನ್ನು ಕಾಲೇಜು ಶಿಕ್ಷಣ ಇಲಾಖೆಯು ಮೂರೇ ದಿನಗಳಲ್ಲಿ ತಡೆಹಿಡಿದಿದೆ. ಹಲವು ವರ್ಷ ಹೋರಾಟ ಮಾಡಿದ್ದ ಸಾವಿರಾರು ಪ್ರಾಧ್ಯಾಪಕರಿಗೆ ಇದರಿಂದ ನಿರಾಸೆ ಮೂಡಿದೆ.

ಸಹಾಯಕ ಪ್ರಾಧ್ಯಾಪಕ ಶ್ರೇಣಿಯಿಂದ ಸಹ ಪ್ರಾಧ್ಯಾಪಕ ಶ್ರೇಣಿಗೆ ಹಲವು ವರ್ಷಗಳ ನಂತರ ಬಡ್ತಿ ನೀಡಲಾಗಿತ್ತು. ವಿಳಂಬ ಮಾಡಿದ್ದ ಅವಧಿಗೆ ಪದೋನ್ನತಿ ಹಿಂಬಾಕಿ ವೇತನ ನೀಡಬೇಕು ಎಂದು ಪ್ರಾಧ್ಯಾಪಕರು ಒತ್ತಾಯಿಸಿದ್ದರು. ಹಣಕಾಸು ಇಲಾಖೆಯು ಮಾರ್ಚ್ 23ರಂದು ಕಾಲೇಜು ಶಿಕ್ಷಣ ಇಲಾಖೆಗೆ ₹13 ಕೋಟಿ ಮಂಜೂರು ಮಾಡಿತ್ತು.

ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು, ‘ಆರು ಮತ್ತು ಏಳನೇ ಪರಿಷ್ಕೃತ ಯುಜಿಸಿ ವೇತನಕ್ಕೆ ಸಂಬಂಧಿಸಿ ಯಾವುದೇ ಹಿಂಬಾಕಿ ಸೆಳೆಯಬಾರದು’ ಎಂದು ಆರು ವಲಯಗಳ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಆದೇಶಿಸಿದ್ದಾರೆ.

‘ಕೇಂದ್ರದ ಆರನೇ ವೇತನ ಆಯೋಗದಲ್ಲಿ ಐದು ತಿಂಗಳು 16 ದಿವಸ ಹಾಗೂ ಏಳನೇ ವೇತನ ಆಯೋಗದಲ್ಲಿ ಏಳರಿಂದ ಒಂಬತ್ತು ತಿಂಗಳ ತುಟ್ಟಿಭತ್ಯೆ ಇನ್ನೂ ಪ್ರಾಧ್ಯಾಪಕರಿಗೆ ಬಿಡುಗಡೆಯಾಗಿಲ್ಲ. ಹೆಚ್ಚುವರಿ ತುಟ್ಟಿಭತ್ಯೆಯನ್ನು ವೇತನ ಆಯೋಗದಿಂದ ನೀಡಬೇಕಿರುವ ಉಳಿದ ತುಟ್ಟಿಭತ್ಯೆಯಿಂದ ಕಡಿತಗೊಳಿಸಲಿ. ಯು.ಜಿ.ಸಿ.ಯಿಂದ ಪಡೆದಿರುವ ತುಟ್ಟಿ
ಭತ್ಯೆಗೂ ಪದೋನ್ನತಿ ಹಿಂಬಾಕಿ ವೇತನಕ್ಕೂ ಸಂಬಂಧವಿಲ್ಲ ಹಿಂಬಾಕಿ ವೇತನವನ್ನು ಪಾವ
ತಿಸಿ’ ಎಂದು ಪ್ರಾಧ್ಯಾಪಕರು ಆಗ್ರಹಿಸಿದ್ದಾರೆ.

‘ಸರ್ಕಾರ ಅನುದಾನಿತ ಮತ್ತು ಸರ್ಕಾರಿ ಕಾಲೇಜುಗಳ ಪ್ರಾಧ್ಯಾಪಕರ ನಡುವೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಎಲ್ಲದಕ್ಕೂ ಕೋರ್ಟ್‌ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ. ನ್ಯಾಯಯುತವಾಗಿಸ್ಥಾನೀಕರಣ ಹಿಂಬಾಕಿ ವೇತನ ಪ್ರಾಧ್ಯಾಪಕರಿಗೆ ನೀಡಲೇಬೇಕು’ ಎಂದು ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಬಿ.ಎ.ಬೆಳವಟಗಿ ಆಗ್ರಹಿಸಿ ದ್ದಾರೆ.

ಈ ಕುರಿತು ಪ್ರತಿಕ್ರಿಯಿ ಸಲು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಮೂಗೇಶಪ್ಪ ನಿರಾಕರಿಸಿದರು.

***

ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರೊಂದಿಗೆ ಚರ್ಚಿಸಿ, ಪದೋನ್ನತಿ ಹಿಂಬಾಕಿ ವೇತನವನ್ನು ತಕ್ಷಣ ಪ್ರಾಧ್ಯಾಪಕರಿಗೆ ನೀಡಲು ಸೂಚಿಸುತ್ತೇನೆ

ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸಭಾಪತಿ

***

ಪದೋನ್ನತಿ ಹಿಂಬಾಕಿ ವೇತನ ನಿರ್ದಿಷ್ಟ ಉದ್ದೇಶಕ್ಕೆ ಬಿಡುಗಡೆಯಾಗಿದೆ. ಈ ಹಣವನ್ನು ವಿಲೇವಾರಿ ಮಾಡುವಂತೆ ಒತ್ತಡ ತರುತ್ತೇನೆ

ಎಸ್.ವಿ.ಸಂಕನೂರು, ವಿಧಾನಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT