ಮೈಸೂರು: ‘ರಾಜ್ಯ ಕಾಂಗ್ರೆಸ್ ಸರ್ಕಾರ ಬೀದಿಯಲ್ಲಿ ತಮಟೆ ಹೊಡೆಯುವುದನ್ನು ನಿಲ್ಲಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದರೆ ಕರ್ನಾಟಕಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಅನುದಾನ ಕೊಡಿಸಲು ನಾನೇ ಮುಂದೆ ನಿಲ್ಲುತ್ತೇನೆ’ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

‘ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿಲ್ಲ. ರಾಜ್ಯ ಸರ್ಕಾರವೇ ಅನ್ಯಾಯ ಮಾಡಿಕೊಳ್ಳುತ್ತಿದೆ. ಸಂಸತ್ ಕಲಾಪಕ್ಕೂ ಮುನ್ನ ಕಾಟಾಚಾರಕ್ಕೆ ರಾಜ್ಯದ ಸಂಸದರ ಸಭೆ ಕರೆದು ಮನವಿ ಸಲ್ಲಿಸುತ್ತಾರೆ. ಸಂಸದರಿಂದ ಅನುದಾನ ಕೊಡಿಸಲು ಸಾಧ್ಯವೇ? ಇಲಾಖೆವಾರು ಖುದ್ದು ಮಂತ್ರಿಗಳನ್ನು ಭೇಟಿ ಮಾಡಬೇಕು. ಅದರ ಮೇಲೆ ಕೆಲಸ ಆಗುತ್ತದೆ. ಕರ್ನಾಟಕದ ಪರ ಕೇಂದ್ರದ ಇಲಾಖೆಗಳಲ್ಲಿ ಧ್ಬನಿ ಎತ್ತಿ ಕೆಲಸ ಮಾಡಲು ಸಿದ್ಧ. ಆದರೆ ನಾನು ಕರ್ನಾಟಕಕ್ಕೆ ಬರುವುದನ್ನೇ ಸಹಿಸದವರಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ’ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಪದೇ ಪದೇ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕೇಂದ್ರವನ್ನು ಬಯ್ದುಕೊಂಡು ತಿರುಗಿದರೆ ನಿಮ್ಮ ಕೆಲಸ ಆಗದು. ನಿಮ್ಮ ನಡವಳಿಕೆ ಬದಲಿಸಿಕೊಳ್ಳಿ, ಸಣ್ಣತನ ಬಿಡಿ’ ಎಂದು ಕಿವಿಮಾತು ಹೇಳಿದರು.

‘ಈ ಬಾರಿಯ ಕೇಂದ್ರ ಬಜೆಟ್ ಕೇವಲ ಎರಡು ರಾಜ್ಯಗಳ ಬಜೆಟ್ ಎಂಬ ಆರೋಪ ಸರಿಯಲ್ಲ. ಕೇಂದ್ರ ಬಜೆಟ್ ದೇಶದ ಸಮಗ್ರ ಅಭಿವೃದ್ಧಿ ಸಲುವಾಗಿಯೇ ಹೊರತು ರಾಜ್ಯಗಳ ಅಭಿವೃದ್ಧಿಗಲ್ಲ. ಆಂಧ್ರ ವಿಭಜನೆ ಆದಾಗಲೇ ಯುಪಿಎ ಸರ್ಕಾರ ಕೇಂದ್ರದಲ್ಲಿ ವಿಶೇಷ ಪ್ಯಾಕೇಜ್ ಗೆ ಕಾಯ್ದೆ ತಂದಿತ್ತು. ಈಗ ಆಂಧ್ರದಲ್ಲಿ ಅಣೆಕಟ್ಟೆ ನಿರ್ಮಾಣಕ್ಕೆ ₹ 15 ಸಾವಿರ ಕೋಟಿ ನೀಡಿದೆ. ಕೋಸಿ ನದಿ ಪ್ರವಾಹ ನಿಯಂತ್ರಣಕ್ಕೆ 20ಕ್ಕೂ ಹೆಚ್ಚು ಬ್ಯಾರೇಜ್ಗಳ ನಿರ್ಮಾಣಕ್ಕೆ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ನೀಡಿದೆ’ ಎಂದು ಸಮರ್ಥಿಸಿಕೊಂಡರು.

‘ಈ ವರ್ಷ ಕರ್ನಾಟಕಕ್ಕೆ ತೆರಿಗೆ ಪಾಲಿನ ₹45,485 ಕೋಟಿ ಹಾಗೂ ಅನುದಾನದ ರೂಪದಲ್ಲಿ ₹15 ಸಾವಿರ ಕೋಟಿ ಸೇರಿ ಒಟ್ಟು ₹60 ಸಾವಿರ ಕೋಟಿ ಬರಲಿದೆ’ ಎಂದು ಮಾಹಿತಿ ನೀಡಿದರು.

‘ಬೆಂಗಳೂರು ಪೆರಿಪೆರಿಯಲ್ ರಸ್ತೆ ನಿರ್ಮಾಣಕ್ಕೆ ₹3 ಸಾವಿರ ಕೋಟಿ ಅನುದಾನ ನೀಡಲು ಕೇಂದ್ರ ಸಿದ್ಧವಿದೆ. ಆದರೆ, ಯೋಜನೆಗೆ ಬೇಕಾದ ಉಳಿದ ₹26 ಸಾವಿರ ಕೋಟಿ ಭರಿಸಲು ಸರ್ಕಾರದ ಬಳಿ ಹಣವಿದೆಯೇ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ಜೂನ್ನಲ್ಲಿ ಸರ್ಕಾರವೇ ಅಮಾನತು ಮಾಡಿದ್ದ ಕಲ್ಲೇಶ ಎಂಬ ಅಧಿಕಾರಿಯನ್ನು ಮುಂದಿಟ್ಟುಕೊಂಡು ಇ.ಡಿ. ವಿರುದ್ಧ ಎಫ್ಐಆರ್ ದಾಖಲಿಸಿದ್ದೀರಿ. ₹40 ಕೋಟಿ ಅನುದಾನ ಬಳಕೆಯ ಲೆಕ್ಕ ನೀಡದ್ದಕ್ಕೆ ಆ ಅಧಿಕಾರಿ ಬಗ್ಗೆ ಕೇಂದ್ರ ಎಂಟು ಪತ್ರ ಬರೆದಿತ್ತು. ಇಂತಹವರನ್ನು ಸಮರ್ಥಿಸಿಕೊಂಡಿದ್ದೀರಿ. ಸರ್ಕಾರದ ಕಾನೂನು ಸಲಹೆಗಾರ ಪೊನ್ನಣ್ಣ ಸರಿಯಾಗಿ ಸಲಹೆ ನೀಡಲಿಲ್ಲವೇ?’ ಎಂದು ಪ್ರಶ್ನಿಸಿದರು.

ಕೈಗಾರಿಕೆಗಳಿಗೆ ಮರು ಹೂಡಿಕೆ

ಎಚ್ಎಂಟಿ, ಭದ್ರಾವತಿ ಕಾರ್ಖಾನೆ ಸೇರಿದಂತೆ ದೇಶದ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳಲ್ಲಿ ಮರುಹೂಡಿಕೆ ಮೂಲಕ ಅವುಗಳಿಗೆ ಮರುಜೀವ ನೀಡುವ ಕೆಲಸ ಮಾಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದರು.

‘ಎಚ್ಎಂಟಿ ಕಾರ್ಖಾನೆಗೆ ನಾನು ಒಮ್ಮೆ ಭೇಟಿ ನೀಡಿದ ಬಳಿಕ ಅದರ ಷೇರು ಮೌಲ್ಯ ₹45ರಿಂದ ₹95ಕ್ಕೆ ಏರಿದೆ. ಅದರಂತೆಯೇ, ರಾಜ್ಯದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಸಾರ್ವಜನಿಕ ಉದ್ದಿಮೆಗಳಿಗೆ ಅಗತ್ಯ ಅನುದಾನ ನೀಡಿ ಪುನಶ್ಚೇತನ ಮಾಡಲಾಗುವುದು. ಮುಂದಿನ ಐದಾರು ತಿಂಗಳಲ್ಲಿ ಇದಕ್ಕೊಂದು ರೂಪ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ಆರೂವರೆ ಕೋಟಿ ಜನರ ಮುಖ್ಯಮಂತ್ರಿ

‘ಸಿದ್ದರಾಮಯ್ಯ ಕೇವಲ ಹಿಂದುಳಿದ ವರ್ಗದವರ ಮುಖ್ಯಮಂತ್ರಿ ಅಲ್ಲ, ರಾಜ್ಯದ ಆರೂವರೆ ಕೋಟಿ ಕನ್ನಡಿಗರ ಮುಖ್ಯಮಂತ್ರಿ. ಅವರ ವಿರುದ್ಧ ಯಾರು ಅಸೂಯೆ ಪಡುತ್ತಾರೆ’ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ‘ನಿಮ್ಮಲ್ಲೇ ಟವಲ್ ಹಾಸಿಕೊಂಡು ಕೂತವರೇ ಚಿತಾವಣೆ ಮಾಡುತ್ತಿದ್ದಾರೆ. 15-20 ವರ್ಷಗಳ ಹಿಂದೆ ಇದ್ದ ಸಿದ್ದರಾಮಯ್ಯ ಈಗ ಇಲ್ಲ’ ಎಂದು ಲೇವಡಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.