ಕಲಬುರ್ಗಿ: ಪರಿಷತ್ ಗದ್ದಲ ವಿಚಾರಕ್ಕೆ ಸಂಬಂಧಿಸಿದಂತೆ ಸಭಾಪತಿ ಆದೇಶಿಸಿರುವ ತನಿಖೆ ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಮಾತ್ರ ಸೀಮಿತವಾಗಿದೆ. ಪರಿಷತ್ ಸದಸ್ಯರ ನಡವಳಿಕೆಗಳ ಬಗ್ಗೆ ತನಿಖೆಗೆ ಸಭಾಪತಿ ಆದೇಶ ನೀಡಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ರೀತಿಯ ಗದ್ದಲ ಗಲಾಟೆ ಯಾರೂ ನಿರೀಕ್ಷಿಸಿರಲಿಲ್ಲ. ಸಭಾಪತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ 14 ದಿನ ಕಳೆದಿತ್ತು. ಹೀಗಾಗಿ ಅವರಾಗಿಯೇ ಕುರ್ಚಿ ಬಿಟ್ಟು ಕೊಡುತ್ತಾರೆ ಎನ್ನುವ ವಿಶ್ವಾಸ ಇತ್ತು. ಬೆಲ್ ಬಾರಿಸಿದ ನಂತರವೂ ಸಭಾಪತಿ ಬಾರದಿರುವ ಕಾರಣ ಉಪಸಭಾಪತಿಯವರನ್ನು ಕೂರಿಸಲಾಯಿತು. ಇದಾದ ನಂತರ ಅನಿರೀಕ್ಷಿತ ರೀತಿನಲ್ಲಿ ಗಲಾಟೆ ಗದ್ದಲ ನಡೆಯಿತು. ಈ ಕುರಿತು ನಡೆಯುತ್ತಿರುವ ತನಿಖೆ ಕೇವಲ ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಮಾತ್ರ ಸೀಮಿತವಾಗಿದೆ' ಎಂದರು.

'ಕಳೆದ ಒಂದು ವರ್ಷದಿಂದ ರಾಜ್ಯ ವಿವಿಧ ಸಂಕಷ್ಟ ಎದುರಿಸುತ್ತಿರುವುದರಿಂದ ಯಾವುದೇ ಶಾಸಕರಿಗೂ ಮೊದಲಿನಂತೆ ಅನುದಾನ ನೀಡಲು ಸಾಧ್ಯವಾಗಿಲ್ಲ. ಎಲ್ಲಾ ಕೆಲಸವು ಸರಿಯಾಗಿ ಆಗಿದೆ ಎಂದು ಆತ್ಮವಿಶ್ವಾಸದಿಂದ ಯಾರು ಹೇಳುವ ಸ್ಥಿತಿಯಲ್ಲಿ ಇಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.