ಬೆಂಗಳೂರು: ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ಎಂಟು ತಿಂಗಳ ಮಗು ಸೇರಿ ಇಬ್ಬರು ಹೆಣ್ಣುಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ವೀರಾರ್ಜುನ್ ವಿಜಯ್ (31), ಅವರ ಪತ್ನಿ ಹೇಮಾವತಿ (29), ಮಕ್ಕಳಾದ ಎಂಟು ತಿಂಗಳ ಸೃಷ್ಠಿ ಸುನಯನಾ, ಎರಡು ವರ್ಷದ ಮೋಕ್ಷಾ ಮೇಘನಯನಾ ಮೃತರು. ಇಬ್ಬರೂ ಮಕ್ಕಳನ್ನು ಕೊಂದು ವಿಜಯ್ ಹಾಗೂ ಹೇಮಾವತಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೀರಾರ್ಜುನ್ ವಿಜಯ್, 6 ವರ್ಷಗಳ ಹಿಂದೆಯಷ್ಟೇ ಹೇಮಾವತಿ ಅವರನ್ನು ಮದುವೆಯಾಗಿದ್ದರು. ಸೀಗೆಹಳ್ಳಿಯ ಸಾಯಿ ಗಾರ್ಡನ್‌ನ ಮನೆಯೊಂದರಲ್ಲಿ ವಾಸವಿದ್ದರು. ಜುಲೈ 31ರಂದು ರಾತ್ರಿ ಇಬ್ಬರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಮನೆಯ ಬಾಗಿಲನ್ನು ಮುರಿದು ತೆಗೆಯಲಾಯಿತು. ಒಳಗಡೆ ಮೃತದೇಹಗಳು ಕಂಡುಬಂದವು. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.