ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Karnataka Update: 4,272 ಹೊಸ ಪ್ರಕರಣ; 6,126 ಮಂದಿ ಗುಣಮುಖ

ಅಕ್ಷರ ಗಾತ್ರ

ಬೆಂಗಳೂರು:24 ಗಂಟೆಗಳಲ್ಲಿ ರಾಜ್ಯದಲ್ಲಿಹೊಸದಾಗಿ 4,272 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಕರ್ನಾಟಕದಲ್ಲಿ ಇದುವರೆಗೆ ವರದಿಯಾದ ಸೋಂಕು ಪ್ರಕರಣಗಳ ಸಂಖ್ಯೆ 28,31,026ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇಂದು ಮೃತಪಟ್ಟ 115 ಮಂದಿಯೂ ಸೇರಿದಂತೆ ಈವರೆಗೆ ಒಟ್ಟು 34,654 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಸೊಂಕಿನಿಂದ ಮೃತಪಟ್ಟವರ ಪ್ರಮಾಣ ಶೇ. 2.69ರಷ್ಟಿದೆ.ಹೊಸದಾಗಿ 6,126 ಮಂದಿ ಚೇತರಿಸಿಕೊಂಡಿದ್ದು, ಸದ್ಯ 1,05,226 ಪ್ರಕರಣಗಳು ಸಕ್ರಿಯವಾಗಿವೆ.

ಬೆಂಗಳೂರಿನಲ್ಲಿ 955 ಹೊಸ ಪ್ರಕರಣ
ರಾಜಧಾನಿ ಬೆಂಗಳೂರಿನಲ್ಲಿಎಂದಿನಂತೆ ಅತಿ ಹೆಚ್ಚುಹೊಸ ಪ್ರಕರಣಗಳು ವರದಿಯಾಗಿವೆ. ನಗರದಲ್ಲಿ ಇಂದು 955 ಪ್ರಕರಣಗಳು ಪತ್ತೆಯಾಗಿದ್ದು, 16 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಇಲ್ಲಿ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ12,10,642ಕ್ಕೆ ಮತ್ತು ಸಾವಿನ ಸಂಖ್ಯೆ 15570ಕ್ಕೆ ತಲುಪಿದೆ. ಉಳಿದಂತೆಮೈಸೂರು (647),ದಕ್ಷಿಣ ಕನ್ನಡ (375),ಹಾಸನ (320),ಶಿವಮೊಗ್ಗ (217), ಚಿಕ್ಕಮಗಳೂರು (200),ಕೊಡಗು (160), ತುಮಕೂರು (159), ಉಡುಪಿ (139), ಕೋಲಾರ (134),ಮಂಡ್ಯ (134) ಮತ್ತುಬೆಳಗಾವಿಯಲ್ಲಿ (115)ನೂರಕ್ಕಿಂತ ಅಧಿಕ ಹೊಸ ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT