ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಪರಿಣಾಮ ಗಂಭೀರಾವಸ್ಥೆ ತಲುಪಿರುವ ಬೆನ್ನಲ್ಲೇ, 45 ವರ್ಷ ದಾಟಿದವರಿಗೆ ಉಚಿತವಾಗಿ ವಿತರಿಸಲು ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆ ಕೊರತೆ ಉಂಟಾಗಿದೆ. ಕೇಂದ್ರ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಪೂರೈಸದೇ ಇರುವುದರಿಂದ ಬಹುತೇಕ ಜಿಲ್ಲೆಗಳಲ್ಲಿ ಲಸಿಕೆ ವಿತರಣೆಯಲ್ಲಿ ವ್ಯತ್ಯಯವಾಗಿದೆ.

ಶನಿವಾರದಿಂದ (ಮೇ 1) ಖಾಸಗಿಯವರು ಲಸಿಕೆ ಉತ್ಪಾದಿಸುವ ಕಂಪನಿಗಳಿಂದ ಖರೀದಿಸಿ ಜನರಿಗೆ ವಿತರಿಸಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿದ್ದು, ಮುಕ್ತ ಮಾರುಕಟ್ಟೆಗೆ ತೆರೆದುಕೊಳ್ಳಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗದೇ ಇದ್ದಾಗ ಜನರು ಲಸಿಕೆಗಾಗಿ ಖಾಸಗಿ ಆಸ್ಪತ್ರೆಗಳ ಮೊರೆಹೋಗಬಹುದು. ಇದರಿಂದಾಗಿ, ಲಸಿಕೆ ಮಾರಾಟ ಕಾಳಸಂತೆಯ ವಹಿವಾಟಿಗೆ ತಿರುಗಿಕೊಂಡು, ಮತ್ತಷ್ಟು ಕೃತಕವಾಗಿ ಅಭಾವ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿದೆ.

‘ಈವರೆಗೆ ಜಿಲ್ಲಾಮಟ್ಟದಲ್ಲಿ ಆರೋಗ್ಯ ಇಲಾಖೆ ಗುರುತಿಸಿದ ಖಾಸಗಿ ಕೋವಿಡ್ ಲಸಿಕಾ ಕೇಂದ್ರಗಳು ಪ್ರತಿ ಡೋಸ್ಗೆ ₹ 150ರಂತೆಸರ್ಕಾರಕ್ಕೆ ಪಾವತಿಸಿ, ₹ 100 ಸೇವಾ ಶುಲ್ಕ ವಿಧಿಸಿ ವಿತರಿಸುತ್ತಿದ್ದವು.ಇನ್ನು ಮುಂದೆ, ಲಸಿಕೆ ಉತ್ಪಾದಕ ಕಂಪನಿಯಿಂದ ವಿತರಕರ ಮೂಲಕ ಖರೀದಿಸಿ ಮಾರಾಟ ಮಾಡಲು ಅವಕಾಶ ಆಗಲಿದೆ. ಈ ವ್ಯವಸ್ಥೆಯಿಂದ, ಕಂಪನಿಗಳು ಸರ್ಕಾರಕ್ಕೆ ಪೂರೈಸುವ ಬದಲು, ಹೆಚ್ಚು ಹಣ ಪಡೆದು ಖಾಸಗಿ ವಲಯಕ್ಕೆ ಲಸಿಕೆ ನೀಡುವ ಸಾಧ್ಯತೆ ಇದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

‘ಉತ್ಪಾದಿಸಿದ ಶೇ 50ರಷ್ಟನ್ನು ಸರ್ಕಾರಕ್ಕೆ, ಶೇ 50ರಷ್ಟನ್ನು ಮುಕ್ತ ಮಾರುಕಟ್ಟೆಗೆ ಕಂಪನಿಗಳು ನೀಡಲಿವೆ. ಹೆಚ್ಚು ಲಾಭದ ಉದ್ದೇಶದಿಂದ ಮುಕ್ತ ಮಾರುಕಟ್ಟೆಗೆ ಹೆಚ್ಚು ಪ್ರಮಾಣದಲ್ಲಿ ಲಸಿಕೆ ನೀಡಿದರೆ, ಸರ್ಕಾರಿ ವಲಯಕ್ಕೆ ಕೊರತೆಯಾಗುವುದು ಖಚಿತ. ಖಾಸಗಿಯಲ್ಲಿ ವಿತರಿಸುವ ಲಸಿಕೆಗೆ ಸರ್ಕಾರವೇ ದರ ನಿಗದಿಪಡಿಸದಿದ್ದರೆ ಕಾಳಸಂತೆಗೆ ದಾರಿ ಆಗಲಿದೆ’ ಎಂದರು.

‘45 ವಯಸ್ಸು ದಾಟಿದವರಿಗೆ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯನ್ನು ಕೇಂದ್ರ ಸರ್ಕಾರ ಉಚಿತವಾಗಿ ನೀಡುತ್ತಿದೆ. ಕೇಂದ್ರದಿಂದ ಬಂದ ಲಸಿಕೆಯನ್ನು ಆರೋಗ್ಯ ಇಲಾಖೆ ಸಾಮಾನ್ಯವಾಗಿ ದಿನ ಬಿಟ್ಟು ದಿನ ಜಿಲ್ಲೆಗಳಿಗೆ ಪೂರೈಸುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ಬಂದ ಪ್ರಮಾಣ ಆಧರಿಸಿ, ಬೆಂಗಳೂರು ನಗರ, ತುಮಕೂರಿನಂಥ ದೊಡ್ಡ ಜಿಲ್ಲೆಗಳಿಗೆ 15 ಸಾವಿರ 20 ಸಾವಿರ ಡೋಸ್ ಹಂಚಿಕೆ ಮಾಡಲಾಗುತ್ತದೆ. ಇತರ ಜಿಲ್ಲೆಗಳಿಗೆ ಕಡಿಮೆ ಪ್ರಮಾಣದಲ್ಲಿ ವಿತರಿಸಲಾಗುತ್ತದೆ. ಆದರೆ, 2– 3 ದಿನಗಳಿಂದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ’ ಎಂದು ವೈದ್ಯಾಧಿಕಾರಿಯೊಬ್ಬರು ಹೇಳಿದರು.

‘ಹೀಗಾಗಿ, ಲಸಿಕೆ ಹಾಕಿಸಿಕೊಳ್ಳಲು ಬಂದವರು ವಾಪಸ್ ಹೋಗಬೇಕಾಯಿತು’ ಎಂದು ತಿಳಿಸಿದ್ದಾರೆ.

ತುಮಕೂರು ಸೇರಿದಂತೆ ಕೆಲವು ಜಿಲ್ಲೆಗಳಿಗೆ ಕೋವಿಶೀಲ್ಡ್ ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸಲಾಗಿದೆ. ಈ ಮೊದಲು ಕೋವ್ಯಾಕ್ಸಿನ್ ಹೆಚ್ಚು ವಿತರಣೆಯಾಗಿರುವ ಜಿಲ್ಲೆಗಳಿಗೆ ಅದನ್ನೇ ನೀಡಲಾಗಿದೆ. ಕೆಲವು ದಿನಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಕೇಂದ್ರ ಸರ್ಕಾರ ಪೂರೈಕೆ ಮಾಡದಿರುವುದರಿಂದ ಈಗಲೇ ಮೊದಲ ಡೋಸ್ ತೆಗೆದುಕೊಂಡವರಿಗೆ ಎರಡನೇ ಡೋಸ್ ನೀಡಲು ಸಾಧ್ಯವಾಗಿಲ್ಲ’ ಎಂದರು.

‘ಕೇಂದ್ರ ಸರ್ಕಾರದ ಸೂಚನೆಯಂತೆ, 18 ವರ್ಷ ದಾಟಿದವರಿಗೆ ಲಸಿಕೆ ನೀಡುವ ಉದ್ದೇಶದಿಂದ ಕೋವಿಶೀಲ್ಡ್ 2 ಕೋಟಿ ಡೋಸ್ ಪೂರೈಸುವಂತೆ ಉತ್ಪಾದಕ ಕಂಪನಿಗೆ ನಾವು ಕಳೆದ ವಾರವೇ ಹಣ ಪಾವತಿಸಿದ್ದೇವೆ. 3 ಲಕ್ಷ ಡೋಸ್ ಬಂದಿದೆ. ನಮ್ಮ ಸಂಗ್ರಹದಲ್ಲಿದ್ದ ಒಂದು ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯನ್ನೂ ಸೇರಿಸಿ, ಒಟ್ಟು 4 ಲಕ್ಷ ಡೋಸ್ ಲಸಿಕೆಯನ್ನು 18 ವರ್ಷ ದಾಟಿದವರಿಗೆ ನೀಡಲು ತೀರ್ಮಾನಿಸಿದ್ದೇವೆ’ ಎಂದು ಆರೋಗ್ಯ ಇಲಾಖೆಯ ಆಯುಕ್ತ ಕೆ.ವಿ. ತ್ರಿಲೋಕಚಂದ್ರ ತಿಳಿಸಿದರು.

ಕೇಂದ್ರ ಸರ್ಕಾರ ಹಂತ ಹಂತವಾಗಿ ಲಸಿಕೆ ಪೂರೈಸುತ್ತಿದೆ. ಮುಂದಿನ ದಿನಗಳಲ್ಲಿ ಅಗತ್ಯ ಪ್ರಮಾಣದ ಲಸಿಕೆ ಪೂರೈಕೆಯಾಗುವ ನಿರೀಕ್ಷೆ ಇದೆ.
-ಕೆ.ವಿ ತ್ರಿಲೋಕಚಂದ್ರ, ಆಯುಕ್ತ, ಆರೋಗ್ಯ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.