ಬೆಂಗಳೂರು: ಡಿಪ್ಲೊಮಾ ಮರು ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಪ್ರಕಟಿಸಿದ್ದು, ಅರ್ಹರು ಸೆ. 10ರಂದು ನಿಗದಿತ ಡಿಪ್ಲೊಮಾ ಕಾಲೇಜುಗಳಲ್ಲಿ ನಡೆಯುವ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
18ಕ್ಕೆ ಎಂಇ, ಎಂ.ಟೆಕ್ ಪರೀಕ್ಷೆ: ಎಂ.ಇ, ಎಂ.ಟೆಕ್ ಮತ್ತು ವಾಸ್ತುಶಿಲ್ಪ ಶಾಸ್ತ್ರ ಕೋರ್ಸ್‌ಗಳ ಪ್ರವೇಶಕ್ಕೆ ಸೆ.18ರಂದು ಆಫ್‌ಲೈನ್ ಮೂಲಕ ಪರೀಕ್ಷೆ ನಡೆಯಲಿದೆ. ಸೆ.11ರಿಂದ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.
‘ಚಾಯ್ಸ್’ ಆಯ್ಕೆ ಇಂದು ಕೊನೆ ಅವಕಾಶ: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಮೊದಲ ಸುತ್ತಿನ ಸೀಟು ಹಂಚಿಕೆಯಾದ ವಿದ್ಯಾರ್ಥಿಗಳಿಗೆ ‘ಚಾಯ್ಸ್’ ದಾಖಲಿಸಲು ಸೆ.5ರ ಬೆಳಿಗ್ಗೆ 11ರವರೆಗೆ ಅವಕಾಶ ನೀಡಲಾಗಿದೆ. ಸಂಜೆ 4ರ ಒಳಗೆ ಶುಲ್ಕ ಪಾವತಿಸಬಹುದು.