ಬೆಂಗಳೂರು: ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ದಾಸ್ ಆಯೋಗ ನೀಡಿದ ವರದಿಯ ಶಿಫಾರಸಿನಂತೆಯೇ 101 ಜಾತಿಗಳಿಗೂ ಒಳಮೀಸಲಾತಿ ಪ್ರಮಾಣ ನಿಗದಿ ಮಾಡಬೇಕು ಎಂದು ಅಹಿಂದ ಚಳವಳಿ ರಾಜ್ಯ ಸಂಚಾಲಕ ಆರ್.ಸುರೇಂದ್ರ ಒತ್ತಾಯಿಸಿದ್ದಾರೆ.

ನೇರ ನೇಮಕಾತಿ ಜತೆಗೆ ಬಡ್ತಿ, ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೂ ಒಳಮೀಸಲಾತಿ ಅನ್ವಯಿಸಬೇಕು. ಈಗ ಸಿದ್ಧಪಡಿಸಿರುವ ಮಸೂದೆಯನ್ನೇ ರಾಜ್ಯಪಾಲರಿಗೆ ಮರು ಸಲ್ಲಿಸಿದರೆ ಮಾದಿಗ ಸಮುದಾಯ ಮತ್ತು ಅಲೆಮಾರಿಗಳಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಆಯೋಗದ ಶಿಫಾರಸಿನಂತೆ ಒಳ ಮೀಸಲಾತಿ ನಿಗದಿ ಮಾಡಿ, ಮತ್ತೆ ಸದನದ ಒಪ್ಪಿಗೆ ಪಡೆಯಬೇಕು. ನಂತರ ರಾಜ್ಯಪಾಲರ ಸಹಿಗೆ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರದಂತೆ ಒಳಮೀಸಲಾತಿ ಜಾರಿಗೆ ತಂದರೆ ಕೆಲ ಜಾತಿಗಳಿಗೆ ಮಾತ್ರ ಅನುಕೂಲವಾಗುತ್ತದೆ. 2023ರ ಚುನಾವಣೆಯಲ್ಲಿ ಮಾದಿಗ, ಅಲೆಮಾರಿ ಸಮುದಾಯಕ್ಕೆ ನೀಡಿದ್ದ ಭರವಸೆ ಈಡೇರಿಸಲು ಸರ್ಕಾರ ನೆಪ ಹೇಳುತ್ತಿದೆ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.