ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ವಿಧಾನಸೌಧದ ವಿಧಾನಸಭೆಯಲ್ಲಿ ನೆಹರೂ, ಅಟಲ್‌ ಭಾವಚಿತ್ರ ಅಳವಡಿಸಲು ಸಲಹೆ

Published 11 ಡಿಸೆಂಬರ್ 2023, 15:42 IST
Last Updated 11 ಡಿಸೆಂಬರ್ 2023, 15:42 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದ ವಿಧಾನಸಭೆ ಸಭಾಂಗಣದಲ್ಲಿ ಜವಾಹರಲಾಲ್‌ ನೆಹರೂ, ಇಂದಿರಾಗಾಂಧಿ, ಅಟಲ್‌ಬಿಹಾರಿ ವಾಜಪೇಯಿ ಸೇರಿ ಹಲವು ಗಣ್ಯರ ಭಾವಚಿತ್ರಗಳನ್ನು ಅಳವಡಿಸಬೇಕು ಎಂದು ಶಾಸಕ ಬಸವರಾಜ ರಾಯರಡ್ಡಿ ಮನವಿ ಮಾಡಿದ್ದಾರೆ.

ಈ ಕುರಿತು ಸಭಾಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ಮುಂದಿನ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ವಿಚಾರವಾಗಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಹಾಲಿ ಇರುವ ಯಾವುದೇ ಭಾವಚಿತ್ರಗಳನ್ನು ತೆಗೆಯುವ ಕುರಿತು ಅವರು ಪ್ರಸ್ತಾಪಿಸಿಲ್ಲ. 'ಈಗಿರುವ ಭಾವಚಿತ್ರಗಳ ಜತೆ ಹೆಚ್ಚುವರಿಯಾಗಿ ಅಳವಡಿಸಬೇಕು' ಎಂದು ಹೇಳಿದ್ದಾರೆ.

‘ಬಸವೇಶ್ವರರ ಈಗಿರುವ ಭಾವಚಿತ್ರದ ಬದಲಿಗೆ ಕಿರೀಟ ಧರಿಸಿರುವ ಭಾವಚಿತ್ರ ಹಾಕಬೇಕು. ಗಾಂಧಿಯವರ ಭಾವಚಿತ್ರ ಕೆಳಗಿದ್ದು, ಬಸವೇಶ್ವರರ ಭಾವಚಿತ್ರದ ಜೊತೆಗೆ ಇಡಬೇಕು. ಸುಭಾಷ್ ಚಂದ್ರ ಬೋಸ್‌ ಅವರು ಧೋತಿ ಮತ್ತು ಅಂಗಿ ಧರಿಸಿರುವ ಭಾವಚಿತ್ರ ಹಾಕಿದ್ದು, ಅದರ ಬದಲಿಗೆ ಸೇನಾ ಸಮವಸ್ತ್ರದಲ್ಲಿರುವ ಭಾವಚಿತ್ರ ಅಳವಡಿಸುವುದು ಸೂಕ್ತ’ ಎಂದು ಅವರು ಸಲಹೆ ನೀಡಿದ್ದಾರೆ.

‘ಅಂಬೇಡ್ಕರ್‌ ಅವರ ಭಾವಚಿತ್ರ ನಿಜ ರೂಪದಲ್ಲಿಲ್ಲ. ಅವರನ್ನು ಗುರುತಿಸುವುದು ಕಷ್ಟವಾಗಿದೆ. ಅದನ್ನು ಬದಲಿಸಿ ಸಂವಿಧಾನ ಪ್ರತಿ ಹಿಡಿದಿರುವ ಭಾವಚಿತ್ರ ಹಾಕಬೇಕು. ಅಲ್ಲದೇ, ಪ್ರಥಮ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್‌, ಎಸ್‌.ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಅವರ ಭಾವಚಿತ್ರವನ್ನು ಅಳವಡಿಸಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT