ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್‌ ರೇವಣ್ಣ ಪ್ರಕರಣ | ಎಸ್‌ಐಟಿಗೆ ಎಲ್ಲ ದಾಖಲೆ ನೀಡುವೆ: ದೇವರಾಜೇಗೌಡ

Published 30 ಏಪ್ರಿಲ್ 2024, 15:41 IST
Last Updated 30 ಏಪ್ರಿಲ್ 2024, 15:41 IST
ಅಕ್ಷರ ಗಾತ್ರ

ಬೆಂಗಳೂರು: ‘ಪೆನ್‌ಡ್ರೈವ್‌ನಲ್ಲಿದ್ದ ವಿವರಗಳು ಬಹಿರಂಗ ಮಾಡಿರುವುದು ರೇವಣ್ಣ ಕುಟುಂಬದ ಮಾಜಿ ಕಾರು ಚಾಲಕ ಕಾರ್ತಿಕ್‌. ಅವನ ಆರೋಪಕ್ಕೆ ಪ್ರತಿಕ್ರಿಯಿಸುವುದಿಲ್ಲ. ಪೆನ್‌ಡ್ರೈವ್‌ ಹಂಚಿಕೆ ಹಿಂದೆ ಯಾರಿದ್ದಾರೆ ಎನ್ನುವ ಎಲ್ಲ ಪ್ರಮುಖ ದಾಖಲೆಗಳನ್ನು ಎಸ್‌ಐಟಿಗೆ ನೀಡುತ್ತೇನೆ’ ಎಂದು ಹಾಸನ ಜಿಲ್ಲೆಯ ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು,‘ಅಶ್ಲೀಲ ವಿಡಿಯೊಗಳ ಪೆನ್‌ಡ್ರೈವ್‌ ಅನ್ನು ನನಗೆ ಕಾರ್ತಿಕ್‌ ಕೊಟ್ಟಿದ್ದು ನಿಜ. ಆದರೆ, ಆತ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ ಸೇರಿದಂತೆ ಕಾಂಗ್ರೆಸ್‌ ಮುಖಂಡರ ಸಂಪರ್ಕದಲ್ಲೆ ಇದ್ದ. ಕಾರ್ತಿಕ್‌ ಬಳಿ ಪೆನ್‌ಡ್ರೈವ್‌ ಹೇಗೆ ಬಂತು? ಚುನಾವಣೆ ಮೂರು ದಿನ ಇರುವಾಗ ಹೇಗೆ ಬಹಿರಂಗವಾಯಿತು? ಕಾಂಗ್ರೆಸ್‌ ಪಾತ್ರವೇನು ಎನ್ನುವ ಕುರಿತು ಸರಿಯಾದ ತನಿಖೆಯಾಗಬೇಕು. ಇಲ್ಲದಿದ್ದರೆ ಸಿಬಿಐಗೆ ವಹಿಸಬೇಕು’ ಎಂದು ಒತ್ತಾಯಿಸಿದರು.

‘ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್ ಅವರ ಸಾಮಾಜಿಕ ಜಾಲತಾಣದ ಉಸ್ತುವಾರಿಯನ್ನು ಕಾರ್ತಿಕ್ ವಹಿಸಿಕೊಂಡಿದ್ದ. ಚುನಾವಣೆ ಸಮಯದಲ್ಲಿ ಏನೆಲ್ಲ ನಡೆದಿದೆ ಎನ್ನುವುದು ಗೊತ್ತಿದೆ. ತಾನೇ ತೋಡಿದ ಗುಂಡಿಯಲ್ಲಿ ಕಾಂಗ್ರೆಸ್ ಬೀಳಲಿದೆ’ ಎಂದರು.

‘ರೇವಣ್ಣ ಕುಟುಂಬ ಕಾರ್ತಿಕ್‌ ಕುಟುಂಬದ ಮೇಲೆ ದೌರ್ಜನ್ಯ ಎಸಗಿದಾಗ ಕಾಂಗ್ರೆಸ್‌ ಮುಖಂಡರನ್ನು ಸಂಪರ್ಕಿಸಿದ್ದ. ಅವರ ಬಳಿ ನ್ಯಾಯ ಸಿಗಲಿಲ್ಲ ಎಂದು ನನ್ನ ಬಳಿ ಬಂದಿದ್ದ. ಆಗ ಪೆನ್‌ಡ್ರೈವ್‌ನಲ್ಲಿನ ವಿವರ ಬಹಿರಂಗ ಮಾಡದಂತೆ ಕೋರ್ಟ್‌ ತಡೆ ನೀಡಿತ್ತು. ಹಾಗಾಗಿ, ವಕೀಲನಾಗಿರುವುದರಿಂದ ನನ್ನ ಬಳಿ ಪೆನ್‌ಡ್ರೈವ್‌ ಕೊಟ್ಟಿದ್ದ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT