ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಂತಿಗಳಲ್ಲೂ ತಾರತಮ್ಯ: ನಂಜುಂಡಿ ಆಕ್ರೋಶ

Last Updated 22 ಡಿಸೆಂಬರ್ 2022, 21:45 IST
ಅಕ್ಷರ ಗಾತ್ರ

ಬೆಳಗಾವಿ: ’ವಿಶ್ವಕರ್ಮರಂತಹ ಸಣ್ಣ ಸಮುದಾಯಗಳಿಗೆ ಸೇರಿದ ಮಹನೀಯರ ಜಯಂತಿ ಆಚರಣೆಸಂದರ್ಭಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ‘ ಬಿಜೆಪಿ ಸದಸ್ಯ ಕೆ.ಪಿ. ನಂಜುಂಡಿ ವಿಧಾನ ಪರಿಷತ್‌ನಲ್ಲಿ ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಿಯಮ–72ರ ಅಡಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ’ಬಲಿಷ್ಠ ಸಮುದಾಯಗಳಿಗೆ ಸೇರಿದ ಕೆಂಪೇಗೌಡ, ಬಸವೇಶ್ವರ, ವಾಲ್ಮೀಕಿ ಜಯಂತಿಗಳನ್ನು ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ಸಣ್ಣ, ಸಣ್ಣ ಸಮುದಾಯಗಳ ಜಯಂತಿ ಆಚರಣೆಗೆ ಸರ್ಕಾರ ತಾತ್ಸಾರ ತೋರುತ್ತಿದೆ. ಸಚಿವರು ಸಹ ಜಯಂತಿಗಳಲ್ಲಿ ಭಾಗವಹಿಸುವುದಿಲ್ಲ‘ ಎಂದು ಹೇಳಿದರು.

‘ನಿರ್ಲಕ್ಷಿತ ಸಮಾಜದವರ ಜಯಂತಿಗಳಲ್ಲಿ ಕೆಲವು ಕಿರಿಯ ಅಧಿಕಾರಿಗಳು ಮಾತ್ರ ಭಾಗವಹಿಸುತ್ತಾರೆ. ಅವರಿಗೆ ಸರಿಯಾಗಿ ಮಾಹಿತಿಯೂ ಇರುವುದಿಲ್ಲ. ನಾವು ಹಣ ಸಂಗ್ರಹಿಸಿ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಆದರೆ, ನಮಗೆ ಕೊಡಬೇಕಾದ ಗೌರವವನ್ನಾದರೂ ಕೊಡಿ‘ ಎಂದು ಅಳಲು ತೋಡಿಕೊಂಡರು.

ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿ, ‘ನಂಜುಂಡಿ ಅವರ ನೋವು ಅರ್ಥ ಮಾಡಿಕೊಳ್ಳಿ. ಜಯಂತಿ
ಗಳು ಸಮರ್ಪಕವಾಗಿ ನಡೆಯಬೇಕು ಮತ್ತು ಸಚಿವರು ಭಾಗವಹಿಸಬೇಕು ಎಂದು ಸುತ್ತೋಲೆ ಹೊರಡಿಸಿ‘ ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸೂಚಿಸಿದರು.

ಕರ್ನಾಟಕ್ಕೆ ಜಗ್ಗಿ ವಾಸುದೇವ್‌ ಕೊಡುಗೆ ಏನು?

’197 ಕಾಯಕ ಸಮಾಜಗಳ ಬಗ್ಗೆ ಸರ್ಕಾರ ಗಮನಹರಿಸುವುದಿಲ್ಲ. ಆದರೆ, ಜಗ್ಗಿ ವಾಸುದೇವ್ ಅವರಿಗೆ ₹100 ಕೋಟಿ ಕೊಡುತ್ತೀರಿ. ಅವರು ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ‘ ಎಂದು ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಚರ್ಚೆಯ ಸಂದರ್ಭದಲ್ಲಿ ದೂರಿದರು. ‘ಬಾಬಾ ರಾಮದೇವ್‌ ಸಹ ಒಬ್ಬ ವ್ಯಾಪಾರಿಯಾಗಿದ್ದಾರೆ. ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಅವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತೇನೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT