ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಹೊಸ ಶಾಸಕರ ಕ್ಷೇತ್ರಗಳ ಕಡೆಗಣನೆ: ಕಾಂಗ್ರೆಸ್‌ ಶಾಸಕ ಕೆ.ಎಸ್. ಆನಂದ್‌ ಅಸಮಾಧಾನ

Published : 19 ಮಾರ್ಚ್ 2025, 16:08 IST
Last Updated : 19 ಮಾರ್ಚ್ 2025, 16:08 IST
ಫಾಲೋ ಮಾಡಿ
Comments
‘ಕೊಪ್ಪಳ ವಿ.ವಿಗೆ ಸೌಲಭ್ಯ ಕೊಡಿ’:
‘ಕೊಪ್ಪಳ ವಿಶ್ವವಿದ್ಯಾಲಯ ಸೌಲಭ್ಯಗಳ ಕೊರತೆಯಿಂದ ಮುಚ್ಚುವ ಸ್ಥಿತಿಗೆ ತಲುಪಿದೆ. ಅದನ್ನು ಉಳಿಸಿಕೊಳ್ಳಲು ಸೌಲಭ್ಯಗಳನ್ನು ಒದಗಿಸಿ’ ಎಂದು ಬಿಜೆಪಿಯ ಜಿ. ಜನಾರ್ದನ ರೆಡ್ಡಿ ಆಗ್ರಹಿಸಿದರು.
‘ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹ’
‘ಕೃಷಿ ಸಂಬಂಧಿ ಮೂರು ಕಾಯ್ದೆಗಳಿಗೆ ಕೇಂದ್ರ ಸರ್ಕಾರ ತಂದಿದ್ದ ತಿದ್ದುಪಡಿಗಳನ್ನು ರಾಜ್ಯದಲ್ಲಿ ಈವರೆಗೂ ವಾಪಸ್‌ ಪಡೆದಿಲ್ಲ. ತಕ್ಷಣವೇ ತಿದ್ದುಪಡಿ ಹಿಂಪಡೆಯಬೇಕು. ರಾಷ್ಟ್ರೀಯ ಕೃಷಿ ಚೌಕಟ್ಟನ್ನು ತಿರಸ್ಕರಿಸಬೇಕು’ ಎಂದು ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್‌ ಪುಟ್ಟಣ್ಣಯ್ಯ ಆಗ್ರಹಿಸಿದರು.
ಸಿದ್ದರಾಮಯ್ಯ ಇನ್ನೂ 3 ಬಜೆಟ್‌ ಮಂಡಿಸಲಿ’
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಮೂರು ಬಜೆಟ್‌ಗಳನ್ನು ಮಂಡಿಸಲಿ. ಆಗ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಘೋಷಿಸಲಿ’ ಎಂದು ಜೆಡಿಎಸ್‌ನ ಶರಣಗೌಡ ಕಂದಕೂರ ಹೇಳಿದರು. ‘ನನ್ನ ಕ್ಷೇತ್ರದಲ್ಲಿ ಕಾರ್ಖಾನೆಯೊಂದರಿಂದ ಹೊರ ಬರುತ್ತಿರುವ ವಿಷಾನಿಲದಿಂದ ಜನರ ಜೀವಕ್ಕೆ ಅಪಾಯ ಎದುರಾಗಿದೆ. ತಕ್ಷಣ ಆ ಕಾರ್ಖಾನೆ ಮುಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಅರಣ್ಯವಾಸಿಗಳನ್ನು ಹಿಂಸಿಸಬೇಡಿ’
‘ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜಲಾಶಯಗಳ ನಿರ್ಮಾಣಕ್ಕೆ ಜಮೀನು ನೀಡಿ, ಅರಣ್ಯ ಪ್ರದೇಶಗಳಿಗೆ ಸ್ಥಳಾಂತರ ಹೊಂದಿದವರನ್ನು ಹಿಂಸಿಸುವುದನ್ನು ನಿಲ್ಲಿಸಬೇಕು’ ಎಂದು ಕಾಂಗ್ರೆಸ್‌ನ ಅನಿಲ್‌ ಚಿಕ್ಕಮಾದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT