ಬೆಂಗಳೂರು: ‘ಆಗರ್ಭ ಶ್ರೀಮಂತರಾಗಿದ್ದರೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಜೈಲುವಾಸ ಅನುಭವಿಸಿದ್ದ ಜವಾಹರ ಲಾಲ್ ನೆಹರೂ, ನಂತರದ ದಿನಗಳಲ್ಲಿ ನವ ಭಾರತದ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು. ಅವರನ್ನು ಟೀಕಿಸುವ ಯೋಗ್ಯತೆ ಕೋಮುವಾದಿಗಳಾಗಿರುವ ಬಿಜೆಪಿ ನಾಯಕರಿಗೆ ಇದೆಯೆ’ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್. ಮಹದೇವಪ್ಪ ಪ್ರಶ್ನಿಸಿದ್ದಾರೆ.

‘ನೆಹರೂ ಅವರ ದೂರದೃಷ್ಟಿಯ ಫಲವಾಗಿಯೇ ದೇಶ ಅಭಿವೃದ್ಧಿ ಪಥದಲ್ಲಿ ಸಾಗಿತು. ನೆಹರೂ ಅವರು ಸ್ವಾತಂತ್ರ್ಯ ಹೋರಾಟ ನಡೆಸುತ್ತಿದ್ದಾಗ ಇಂದಿನ ಕೂಗುಮಾರಿಗಳಾಗಿರುವ ಮನುವಾದಿಗಳ ಗುಂಪಿನವರು ಬ್ರಿಟಿಷರ ಸೇವಕರಾಗಿದ್ದರು. ನೆಹರೂ ಅವರ ಹೋರಾಟದ ಜೀವನವನ್ನು ಮರೆತು ಮಾತನಾಡುವವರಿಗೆ ಎಂದಿಗೂ ಕ್ಷಮೆ ಇಲ್ಲ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆಹರೂ ಅವರ ಕೊಡುಗೆಗಳನ್ನು ಸ್ಮರಿಸಿದ್ದಾರೆ. ಆದರೆ, ಅವರದ್ದೇ ಪಕ್ಷದ ಕೋಮುವ್ಯಾದಿ ಹುಳುವೊಂದು ಮೂರನೇ ದರ್ಜೆಯ ಪ್ರಚಾರಕ್ಕಾಗಿ ನೆಹರೂ ಅವರನ್ನು ಟೀಕಿಸುವ ತಂತ್ರದ ಮೊರೆ ಹೋಗಿರುವುದು ಅವರ ಮೂರ್ಖತನದ ಪರಮಾವಧಿ. ಮತ್ತೊಮ್ಮೆ ಹುಟ್ಟಿ ಬಂದು ಅಸಮಾನತೆಯ ಸಂಕಷ್ಟ ಮತ್ತು ಜಾತಿ ಕಾರಣದ ನೋವುಗಳನ್ನು ಅನುಭವಿಸಿದರೆ ಮಾತ್ರ ಇವರಿಗೆ ನೆಹರೂ ಕುರಿತು ಮಾತನಾಡುವ ಅರ್ಹತೆ ದೊರೆಯುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.