ಬೆಂಗಳೂರು: ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿದಾಗ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ. ಅದಕ್ಕಾಗಿ ಜಾಗತಿಕ ಆರೋಗ್ಯ ಸಮುದಾಯ ಒಂದಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ದುಬೈನಲ್ಲಿ ನಡೆದ ಮೂರು ದಿನಗಳ ವಿಶ್ವ ಆರೋಗ್ಯ ಪ್ರದರ್ಶನದಲ್ಲಿ ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿರುವ ಆದ್ಯತೆಗಳು ಹಾಗೂ ಕರ್ನಾಟಕದ ಪ್ರಗತಿಯನ್ನು ಪ್ರಸ್ತುತಪಡಿಸಿ ಮಾತನಾಡಿದ ಅವರು, ‘ಆರೋಗ್ಯ ಸವಾಲುಗಳನ್ನು ಎದುರಿಸುವಾಗ ಯಾವುದೇ ಅಡೆತಡೆ, ಗಡಿಗಳು ಇರಬಾರದು, ಮಾನವೀಯತೆಯ ಆಧಾರದಲ್ಲಿ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ದುಬೈನಲ್ಲಿ ನಡೆಯುತ್ತಿರುವ ಮೂರು ದಿನಗಳ ಆರೋಗ್ಯ ಪ್ರದರ್ಶನದಲ್ಲಿ ಚೀನಾ, ಜರ್ಮನಿ, ಅಮೆರಿಕ, ಮತ್ತು ಬ್ರಿಟನ್ ಸೇರಿದಂತೆ 33 ರಾಷ್ಟ್ರಗಳ 180ಕ್ಕೂ ಹೆಚ್ಚು ದೇಶಗಳ 4,800 ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಪ್ರದರ್ಶನವು ಅತ್ಯಾಧುನಿಕ ವೈದ್ಯಕೀಯ ಸಾಧನಗಳು, ಇಮೇಜಿಂಗ್, ಡಯಾಗ್ನೋಸ್ಟಿಕ್ಸ್, ಆರೋಗ್ಯ ರಕ್ಷಣಾ ಐಟಿ, ಡಿಜಿಟಲ್ ಆರೋಗ್ಯ, ಆಸ್ಪತ್ರೆಗಳ ಮೂಲಸೌಕರ್ಯ ಮತ್ತು ಸೇವೆಗಳ ಪ್ರದರ್ಶನ ನಡೆಯುತ್ತಿದೆ.

ಆಸ್ಟರ್ ಡಿಎಂ ಹೆಲ್ತ್ಕೇರ್ಗೆ ಭೇಟಿ: ಆಸ್ಟರ್ ಡಿಎಂ ಹೆಲ್ತ್ಕೇರ್ ಬೂತ್ಗೆ ಭೇಟಿ ನೀಡಿದ ಶರಣ ಪ್ರಕಾಶ ಅವರಿಗೆ ಪ್ರಾಥಮಿಕ, ಮಾಧ್ಯಮಿಕ, ತೃತೀಯ ಮತ್ತು ಕ್ವಾಟರ್ನರಿ ಆರೈಕೆಯನ್ನು ಒಳಗೊಂಡ ಸಮಗ್ರ ವ್ಯವಸ್ಥೆಯನ್ನು ಡಾ.ಆಜಾದ್ ಮೂಪೆನ್, ಅಲಿಶಾ ಮೂಪೆನ್ ವಿವರಿಸಿದರು. ಯುಎಇ ಆರೋಗ್ಯ ಸಚಿವ ಅಹ್ಮದ್ ಅಲ್ ಸಯೇಗ್ ವಿವರಿಸಿದರು. ನಂತರ ತುಂಬೆ ವೈದ್ಯಕೀಯ ಕೇಂದ್ರದ ‘ಮೆಡಿಸಿಟಿ’ಯನ್ನು ಉದ್ಘಾಟಿಸಿದರು. ಡಾ.ತುಂಬೆ ಮೊಯಿದೀನ್, ಕರ್ನಾಟಕ ರಾಜ್ಯ ಅಲೈಡ್ ಹೆಲ್ತ್ಕೇರ್ ಕೌನ್ಸಿಲ್ನ ಅಧ್ಯಕ್ಷ ಯು.ಟಿ. ಇಫ್ತಿಕರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.