ಬೆಂಗಳೂರು: ಅಬಕಾರಿ ನಿಯಮಗಳಡಿ ಕ್ಲಬ್‌ಗಳಿಗೆ ಸಿಎಲ್–4 ಪರವಾನಗಿ ನೀಡಲು ಷರತ್ತುಗಳನ್ನು ಅಬಕಾರಿ ಇಲಾಖೆಯು ಸಡಿಲಗೊಳಿಸಿದೆ. 20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಈ ನೂತನ ನಿಯಮ ಅನ್ವಯವಾಗಲಿದೆ.

ಈ ಮೊದಲು ಸಿಎಲ್–4 ಪರವಾನಗಿ ಪಡೆಯಲು ಕ್ಲಬ್‌ಗಳು ಕನಿಷ್ಠ ಮೂರು ಒಳಾಂಗಣ ಮತ್ತು ಕನಿಷ್ಠ ಎರಡು ಹೊರಾಂಗಣ ಆಟ ಸೇರಿ, ಕನಿಷ್ಠ ಐದು ಆಟಗಳಿಗೆ ಸೌಲಭ್ಯ ಹೊಂದಿರಬೇಕಿತ್ತು. ನಗರಗಳಲ್ಲಿ ಒಳಾಂಗಣ, ಹೊರಾಂಗಣದಲ್ಲಿ ಐದು ಆಟಗಳಿಗೆ ಸ್ಥಳ ಹೊಂದಿಸುವುದು ಕಷ್ಟ. ಹೀಗಾಗಿಯೇ ಈ ನಿಯಮಗಳನ್ನು ಸಡಿಲಗೊಳಿಸಲಾಗಿದೆ ಎಂದು ಇಲಾಖೆಯ ಜಂಟಿ ಆಯುಕ್ತ (ಐಎಂಎಲ್) ಟಿ.ನಾಗರಾಜಪ್ಪ ಅವರು ಮಾಹಿತಿ ನೀಡಿದ್ದಾರೆ.

ಬದಲಾದ ನಿಯಮಗಳ ಪ್ರಕಾರ ಕ್ಲಬ್‌ಗಳು ಹೊಂದಿರಬೇಕಾದ ಹೊರಾಂಗಣ ಮತ್ತು ಒಳಾಂಗಣ ಆಟಗಳ ಕನಿಷ್ಠ ಮಿತಿಯನ್ನು ಸಡಿಲಿಸಲಾಗಿದೆ. ಕ್ಲಬ್‌ಗಳು ಒಟ್ಟು ಐದು ಆಟಗಳಿಗೆ ವ್ಯವಸ್ಥೆ ಹೊಂದಿರಬೇಕು. ಆ ಆಟಗಳು ಒಳಾಂಗಣ ಅಥವಾ ಹೊರಾಂಗಣ ಆಗಿರಬಹುದು. ಆದರೆ, ಕ್ಲಬ್‌ಗಳು ಕನಿಷ್ಠ 10,000 ಚದರ ಅಡಿಗಳಷ್ಟು ಬಿಲ್ಟ್‌ಅಪ್ ಏರಿಯಾ ಹೊಂದಿರಬೇಕು. ಪರವಾನಗಿ ಹೊಂದಿರುವ ಕ್ಲಬ್‌ಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಈ ನಿಯಮಗಳ ಅಡಿಯಲ್ಲೇ ಪರವಾನಗಿಯನ್ನು ನವೀಕರಿಸಲಾಗುತ್ತದೆ.

ಈ ಸಂಬಂಧ ಕರ್ನಾಟಕ ಅಬಕಾರಿ (ದೇಶಿ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಸಂಬಂಧಿತ ತಿದ್ದುಪಡಿ ನಿಯಮಗಳು ಇದೇ 9ರ ರಾಜ್ಯಪತ್ರದಲ್ಲಿ ಪ್ರಕಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.