ಈಶಾನ್ಯ, ನೈರುತ್ಯ, ಬೆಂಗಳೂರು ಪದವೀಧರರ ಕ್ಷೇತ್ರ ಹಾಗೂ ಆಗ್ನೇಯ, ನೈರುತ್ಯ ಶಿಕ್ಷಕರ ಕ್ಷೇತ್ರಗಳ ಸದಸ್ಯರ ಅವಧಿ 2024ರ ಜೂನ್ 6ರಂದು ಮುಗಿಯಲಿದೆ. ನೈರುತ್ಯ ಪದವೀಧರರ ಕ್ಷೇತ್ರದ ಸದಸ್ಯ ಆಯನೂರು ಮಂಜುನಾಥ ಅವರು ರಾಜೀನಾಮೆ ನೀಡಿರುವುದರಿಂದ ಸ್ಥಾನ ಏ.19ರಿಂದ ಖಾಲಿ ಉಳಿದಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ಸದಸ್ಯ ಪುಟ್ಟಣ್ಣ ಅವರು ರಾಜೀನಾಮೆ ನೀಡಿದ್ದರಿಂದ ಮಾರ್ಚ್ 16ರಿಂದ ಖಾಲಿ ಉಳಿದಿದೆ.