ಬೆಂಗಳೂರು: ರಾಜ್ಯದ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳ ತಂತ್ರಜ್ಞಾನ ಆಲೋಚನೆ, ಕಲ್ಪನೆ ಹಾಗೂ ಕನಸುಗಳಿಗೆ ಜೀವ ತುಂಬಲು ದೇಶದಲ್ಲೇ ಮೊದಲ ಶ್ರೇಷ್ಠತಾ ಕೇಂದ್ರ ಆರಂಭಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದರು.

ಎಸ್.ಜೆ. ಪಾಲಿಟೆಕ್ನಿಕ್ನಲ್ಲಿ ಭಾರತದ ಮೊದಲ ಹಸಿರು ಕೌಶಲ, ಕೃತಕ ಬುದ್ಧಿಮತ್ತೆ, ಹವಾಮಾನ ಕ್ರಿಯಾಶೀಲತಾ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗ ಆಧಾರಿತ ಶಿಕ್ಷಣ ವ್ಯವಸ್ಥೆ ಭಾಗವಾಗಿ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕೌಶಲಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಶ್ರೇಷ್ಠತಾ ಕೇಂದ್ರವು ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ ಹಾಗೂ ಉದ್ಯೋಗಾವಕಾಶಗಳಿಗೆ ದಾರಿ ತೋರಲಿದೆ. ಮುಂದಿನ ಮೂರು ವರ್ಷಗಳಲ್ಲಿ 30,000 ವಿದ್ಯಾರ್ಥಿಗಳಿಗೆ ತರಬೇತಿ ಸಿಗಲಿದೆ. ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ ಎಂದರು.

ಒನ್ಎಂ, ಒನ್ಬಿ ಫೌಂಡೇಷನ್, ಮೈಕ್ರೊಸಾಫ್ಟ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಸ್ಟಾರ್ಟಪ್ ಸಹಯೋಗದಲ್ಲಿ ಭಾರತದಲ್ಲೇ ಉನ್ನತ ಗುಣಮಟ್ಟದ ಎಐ ಪ್ರತಿಭೆಗಳನ್ನು ಸೃಷ್ಟಿಸಲು ಅತ್ಯಂತ ಉತ್ಕೃಷ್ಟತೆಯ ಶ್ರೇಷ್ಠತಾ ಕೇಂದ್ರ ಸ್ಥಾಪಿಸಲಾಗಿದೆ. ಹಸಿರು ಶಕ್ತಿ ಮತ್ತು ಪರಿಸರ ಕ್ಷೇತ್ರಗಳನ್ನು ಒಳಗೊಂಡಂತೆ ವಿದ್ಯಾರ್ಥಿಗಳು ಹೊಸ ಆವಿಷ್ಕಾರ ಹಾಗೂ ಕಲಿಕಾ ಕೌಶಲ ವೃದ್ಧಿಸಿಕೊಳ್ಳಬಹುದು. ಈ ಅವಕಾಶವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಪರಿಸರ ಕಾಳಜಿ ಪ್ರದರ್ಶಿಸಬಹುದು ಎಂದು ಹೇಳಿದರು.

ಮೈಕ್ರೊಸಾಫ್ಟ್ ಜಾಗತಿಕ ಮುಖ್ಯಸ್ಥ ಸೋಮಣ್ಣ ಪಾಲಕಂಡ, ಸಿಎಸ್ಆರ್ ಮುಖ್ಯಸ್ಥೆ ಮಂಜು ದಾಸ್ಮಾನ್, ಹಿರಿಯ ನಿರ್ದೇಶಕಿ ಚಿಂತಾಮಣಿ ಪದ್ಮನಾಭನ್, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಖುಷ್ಬೂ ಚೌದರಿ, ಆಯುಕ್ತೆ ಎನ್.ಮಂಜುಶ್ರೀ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.