ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಸಂಸ್ಥೆಯ ಎಫ್ಎಸ್ಎಲ್ ವರದಿ: ಕಾಂಗ್ರೆಸ್‌ ಕಿಡಿ

Published 4 ಮಾರ್ಚ್ 2024, 16:41 IST
Last Updated 4 ಮಾರ್ಚ್ 2024, 16:41 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಯ ಎಫ್ಎಸ್ಎಲ್ ವರದಿ ಬಿಡುಗಡೆ ಮಾಡಿರುವ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

‘ಖಾಸಗಿಯವರು ಯಾರು? ಎಫ್ಎಸ್ಎಲ್ ವರದಿ ತಯಾರಿಸಲು ಅವರಿಗೆ ನಿರಾಕ್ಷೇಪಣಾ ಪತ್ರ ಯಾರು ಕೊಟ್ಟಿದ್ದಾರೆ? ಈ ರೀತಿ ವರದಿ ಕೊಡಲು ಅವರಿಗೆ ಅನುಮತಿ ಇದೆಯೇ? ಎಲ್ಲವನ್ನೂ ಪರಿಶೀಲಿಸುತ್ತೇನೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

‘ಖಾಸಗಿ ಸಂಸ್ಥೆ ತಯಾರಿಸಿದ ಎಫ್​ಎಸ್ಎಲ್​ ವರದಿಯನ್ನು ಬಿಜೆಪಿಯವರು ಬಹಿರಂಗಪಡಿಸಿರುವುದು ದೇಶದ್ರೋಹದ ಕೆಲಸ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್​ ಖರ್ಗೆ ಕಿಡಿಕಾರಿದರು.

‘ಕ್ಲೂ 4 ಎವಿಡೆನ್ಸ್ ಪ್ರಯೋಗಾಲಯದ ವಿಶ್ವಾಸಾರ್ಹತೆ ಏನು? ಖಾಸಗಿಯಾಗಿ ಅವರು ಏನಾದರೂ ಮಾಡಿಕೊಳ್ಳಲಿ. ಆ ಸಂಸ್ಥೆಗೆ ಸರ್ಕಾರದ ಪ್ರಮಾಣಪತ್ರ ‌ಇದ್ದರೆ, ಅವರು ಸ್ಥಳೀಯ ಪೊಲೀಸರಿಗೆ ವರದಿ ನೀಡಬೇಕು. ಬಿಜೆಪಿಯವರು ಪ್ರಯೋಗಾಲಯಕ್ಕೆ ನೀಡಿರುವ ವಿಡಿಯೊ ತುಣುಕು ಯಾವುದು’ ಎಂದು ಪ್ರಶ್ನಿಸಿದರು.

‘ಖಾಸಗಿ ಸಂಸ್ಥೆಗಳಿಂದ ನಾನೂ ವರದಿ ತೆಗೆದುಕೊಂಡಿದ್ದೇನೆ. ಅದನ್ನು ಬಹಿರಂಗಪಡಿಸಬಹುದಿತ್ತು ಅಲ್ಲವೇ? ಆದರೆ, ನಾನು ಹಾಗೆ ಮಾಡಿಲ್ಲ. ಬಿಜೆಪಿಯವರು ಮಾಡಿರುವುದು ನಿಜವಾದ ದೇಶದ್ರೋಹ. ಸಂವಾದ ಫೌಂಡೇಷನ್ ವರದಿ ತೆಗೆದುಕೊಳ್ಳಲು ಬಿಜೆಪಿಯವರಿಗೇನು ಆಸಕ್ತಿ?’ ಎಂದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ‘ಪಾಕಿಸ್ತಾನ ಪರ ಘೋಷಣೆ ಕೂಗಿದ ಸಂಬಂಧ ವರದಿ ನೀಡಿರುವ ಖಾಸಗಿ ಸಂಸ್ಥೆ ಯಾರ ಪರ ಕೆಲಸ ಮಾಡುತ್ತಿದೆ ಎನ್ನುವುದು ಗೊತ್ತಿದೆ. ರಾಜ್ಯದ ಹಿತದೃಷ್ಟಿಯಿಂದ ಈ ಪ್ರಕರಣದಲ್ಲಿ ಪೊಲೀಸರಿಗೆ ತನಿಖೆ ಮಾಡಲು ಬಿಡೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT