ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ತರಕಾರಿ ಮಾರುಕಟ್ಟೆಯಲ್ಲಿ UPI ಮೂಲಕ ಹಣ ಪಾವತಿಸಿದ ಜರ್ಮನ್‌ ಸಚಿವ

Published 21 ಆಗಸ್ಟ್ 2023, 2:59 IST
Last Updated 21 ಆಗಸ್ಟ್ 2023, 2:59 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿ ಡಿಜಿಟಲ್‌ ಇಂಡಿಯಾ ಸೇವೆ ಆರಂಭವಾಗಿ ಕೆಲವೇ ವರ್ಷಗಳಾದರೂ ವೇಗವಾಗಿ ಎಲ್ಲರನ್ನೂ ತಲುಪಿದೆ. ಹಣ ಪಾವತಿಯ ವ್ಯವಹಾರವನ್ನೂ ಸರಾಗಗೊಳಿಸಿದೆ.

ಭಾರತದ ಭೇಟಿ ವೇಳೆ ಜರ್ಮನಿಯ ಡಿಜಿಟಲ್ ಮತ್ತು ಸಾರಿಗೆ ಫೆಡರಲ್ ಮಂತ್ರಿ ವೋಲ್ಕರ್ ವಿಸ್ಸಿಂಗ್ ಅವರು ತರಕಾರಿ ಮಾರುಕಟ್ಟೆಯಲ್ಲಿ UPI ಬಳಸಿ ಹಣ ಪಾವತಿ ಮಾಡಿದ್ದಾರೆ.

ವಿಸ್ಸಿಂಗ್‌ ಅವರು ಆಗಸ್ಟ್‌ 19 ರಂದು  ಬೆಂಗಳೂರಿನಲ್ಲಿ ನಡೆದ ಜಿ20 ಡಿಜಿಟಲ್ ಮಂತ್ರಿಗಳ ಸಭೆಯಲ್ಲಿ ಭಾಗಿಯಾಗಿದ್ದರು.

ಈ ಬಗ್ಗೆ ಭಾರತದಲ್ಲಿನ ಜರ್ಮನ್ ರಾಯಭಾರ ಕಚೇರಿ ಭಾನುವಾರ ಟ್ವಿಟರ್‌ನಲ್ಲಿ (ಎಕ್ಸ್‌ನಲ್ಲಿ) ಡಿಜಿಟಲ್‌ ಹಣ ಪಾವತಿ ವಿಧಾನವು ದೇಶದ ಯಶಸ್ಸಿನ ಕಥೆಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದೆ. ಅಲ್ಲದೆ ವಿಸ್ಸಿಂಗ್ ಅವರು ದಿನಸಿ ಖರೀದಿಸುವ ಮತ್ತು  UPI ಮೂಲಕ ಹಣ  ಪಾವತಿ ಮಾಡಿದ ವೀಡಿಯೊ ಮತ್ತು ಚಿತ್ರಗಳನ್ನು ಹಂಚಿಕೊಂಡಿದೆ.

‘ಭಾರತದ ಯಶಸ್ಸಿನ ಕಥೆಯೆಂದರೆ ಡಿಜಿಟಲ್ ಮೂಲಸೌಕರ್ಯ. UPI ಪ್ರತಿಯೊಬ್ಬರನ್ನು ಸೆಕೆಂಡುಗಳಲ್ಲಿ ವಹಿವಾಟು ಮಾಡಲು ಅನುವು ಮಾಡಿಕೊಡುತ್ತದೆ. ಲಕ್ಷಾಂತರ ಭಾರತೀಯರು ಇದನ್ನು ಬಳಸುತ್ತಾರೆ. ಫೆಡರಲ್ ಡಿಜಿಟಲ್ ಮತ್ತು ಸಾರಿಗೆ ಸಚಿವ ವಿಸ್ಸಿಂಗ್‌ ಅವರು UPI ಪಾವತಿಯ ಸರಳತೆಯನ್ನು ಅನುಭವಿಸಲು ಸಾಧ್ಯವಾಯಿತು’ ಎಂದು ಖುಷಿ ಹಂಚಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT