ಬೆಂಗಳೂರು: ಅನುದಾನದ ಕೊರತೆಯಿಂದ ನಲುಗುತ್ತಿರುವ ವಿಶ್ವವಿದ್ಯಾಲಯಗಳ ಅಧ್ಯಯನ ಪೀಠಗಳಿಗೆ ಕನಿಷ್ಠ ತಲಾ ಒಂದು ಕೋಟಿ ಅನುದಾನ ನೀಡಬೇಕು ಹಾಗೂ ಪೀಠಗಳನ್ನು ಆರಂಭಿಸುವ ಬಗ್ಗೆ ಮಾರ್ಗಸೂಚಿ ರೂಪಿಸಬೇಕು ಎಂದು ಶಿಫಾರಸು ಮಾಡಲು ಸರ್ಕಾರ ರಚಿಸಿದ್ದ ಸಮಿತಿ ತಯಾರಿ ನಡೆಸಿದೆ.

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 110ಕ್ಕೂ ಅಧಿಕ ಅಧ್ಯಯನ ಪೀಠಗಳಿವೆ. ಅವುಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಿ, ಬಲವರ್ಧನೆಗೆ ಶಿಫಾರಸು ಮಾಡಲು ಪ್ರೊ.ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿ ರಚಿಸಿದೆ.

ಈ ಬಗ್ಗೆ ಅಧ್ಯಯನ ನಡೆಸಿರುವ ಸಮಿತಿ ಸದ್ಯದಲ್ಲೇ ವರದಿ ನೀಡಲಿದ್ದು, ಪೀಠಗಳ ಕಾರ್ಯವೈಖರಿಯ ಸುಧಾರಣೆಗೆ ಹಲವು ಶಿಫಾರಸುಗಳನ್ನು ಮಾಡಲು ಉದ್ದೇಶಿಸಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ವಿವಿಧ ವಿಶ್ವವಿದ್ಯಾಲಯಗಳಲ್ಲಿ ಇರುವ ಅಧ್ಯಯನ ಪೀಠಗಳ ಸ್ಥಿತಿಗತಿ ಬಗ್ಗೆ ಕುಲಪತಿ ಹಾಗೂ ಕುಲಸಚಿವರಿಂದ ಸಮಿತಿಯು ಪ್ರಶ್ನಾವಳಿ ರೂಪದಲ್ಲಿ ಈಗಾಗಲೇ ಮಾಹಿತಿ ತರಿಸಿಕೊಂಡಿದೆ. ಈಚೆಗೆ ನಡೆದ ಸಮಿತಿ ಸಭೆಯಲ್ಲಿ ಈ ಬಗ್ಗೆ ವಿವರವಾಗಿ ಚರ್ಚೆ ನಡೆದಿದ್ದು, ಪೀಠಗಳ ವಸ್ತುಸ್ಥಿತಿಯನ್ನು ಕುಲಪತಿಗಳು ಸಮಿತಿಯ ಗಮನಕ್ಕೆ ತಂದಿದ್ದಾರೆ ಎಂದು ಗೊತ್ತಾಗಿದೆ.

‘ಕೆಲವು ಪೀಠಗಳಷ್ಟೇ ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಪೀಠಗಳು ಹೆಸರಿಗಷ್ಟೇ ಇವೆ. ಅನುದಾನ ಹಾಗೂ ಸಿಬ್ಬಂದಿ ಕೊರತೆಯಿಂದ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜಕೀಯ ಒತ್ತಡ, ಸಮುದಾಯಗಳ ಬೇಡಿಕೆ ಸೇರಿದಂತೆ ಹಲವು ಕಾರಣಗಳಿಂದಾಗಿ ಅಗತ್ಯಕ್ಕಿಂತ ಹೆಚ್ಚು ಪೀಠಗಳು ರಚನೆಯಾಗಿವೆ. ಆದರೆ, ಅವುಗಳನ್ನು ಈಗ ಮುಚ್ಚಲು ಸಾಧ್ಯವಿಲ್ಲ’ ಎಂಬ ನಿರ್ಧಾರಕ್ಕೆ ಬರಲಾಗಿದೆ.

‘ಕೆಲವು ಪೀಠಗಳಿಗೆ ₹5 ಲಕ್ಷ ನೀಡಿದ್ದರೆ, ಕೆಲವೊಂದಕ್ಕೆ ₹1 ಕೋಟಿವರೆಗೂ ಅನುದಾನ ನೀಡಲಾಗಿದೆ. ಅನುದಾನ ನೀಡುವಲ್ಲಿ ತಾರತಮ್ಯವಾಗಿದೆ. ಸರ್ಕಾರ ನೀಡುವ ಹಣವನ್ನು ಬ್ಯಾಂಕಿನಲ್ಲಿ ಇಡುಗಂಟು ಇಟ್ಟು, ಬರುವ ಬಡ್ಡಿಯಲ್ಲಿ ಪೀಠಗಳನ್ನು ನಡೆಸಬೇಕು ಎಂದು ನಿಯಮ ಇದೆ. ಪೀಠಗಳು ಸಕ್ರಿಯವಾಗಿ ಕಾರ್ಯನಿರ್ವಹಿಸದೆ ಇರುವುದಕ್ಕೆ ಸಂಪನ್ಮೂಲಗಳ ಕೊರತೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಪೀಠಗಳಿಗೆ ಏಕರೂಪವಾಗಿ ಅನುದಾನ ನಿಗದಿ ಮಾಡುವ ಅಗತ್ಯವಿದೆ’ ಎಂಬ ತೀರ್ಮಾನಕ್ಕೆ ಸಮಿತಿಯು ಬಂದಿದೆ.

ಹೊಸದಾಗಿ ಆರಂಭವಾಗಿರುವ ವಿಶ್ವವಿದ್ಯಾಲಯಗಳಲ್ಲಿ ಯಾವುದೇ ಪೀಠಗಳು ಇಲ್ಲ. ಆದರೆ, ಹಳೆಯ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚು ಪೀಠಗಳು ಇವೆ. ಕೆಲವು ವಿ.ವಿ.ಗಳಲ್ಲಿ 18–20 ಪೀಠಗಳಿವೆ. ಇದಲ್ಲದೆ ಕೆಲವು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಕೇಂದ್ರಗಳು/ಸಂಸ್ಥೆಗಳು ಇವೆ. ಆದರೆ, ಇವು ಸಮಿತಿಯ ಅಧ್ಯಯನ ವ್ಯಾಪ್ತಿಗೆ ಬರುವುದಿಲ್ಲ. ಪೀಠಗಳಿಗೆ ಸೀಮಿತವಾಗಿ ಶಿಫಾರಸು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈಗಿರುವ ಪೀಠಗಳ ಬಲವರ್ಧನೆ, ಅರ್ಥಪೂರ್ಣ ಕಾರ್ಯಕ್ರಮಗಳ ಆಯೋಜನೆ ಮಾಡುವುದು ಸೇರಿದಂತೆ 5–6 ಶಿಫಾರಸುಗಳನ್ನು ಮಾಡುವ ಸಾಧ್ಯತೆ ಇದೆ.

ಹಂಪಿ ವಿಶ್ವವಿದ್ಯಾಲಯದ ಡಾ.ರಾಜ್ಕುಮಾರ್ ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾಲಯದ ನಾರಾಯಣ ಗುರು ಅಧ್ಯಯನ ಪೀಠ, ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಪೀಠ, ವಿವಿಧ ವಿಶ್ವವಿದ್ಯಾಲಯಗಳಲ್ಲಿ ಇರುವ ಅಂಬೇಡ್ಕರ್ ಅಧ್ಯಯನ ಪೀಠಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಆಯಾ ವಿಶ್ವವಿದ್ಯಾಲಯದ ಕುಲಪತಿಗಳು ಸಮಿತಿಗೆ ಮಾಹಿತಿ ನೀಡಿದ್ದಾರೆ.

ಅಧ್ಯಯನ ಪೀಠಗಳ ಕುರಿತು ತುಮಕೂರು ವಿ.ವಿ ವಿಶ್ರಾಂತ ಕುಲಪತಿ ಓ.ಅನಂತರಾಮಯ್ಯ ಅವರು ಹಿಂದೆ ಸಲ್ಲಿಸಿದ ವರದಿ ಪರಿಶೀಲಿಸಿ, ಪರಿಷ್ಕೃತ ವರದಿ ನೀಡಲು ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಸಾಹಿತಿಗಳಾದ ನಟರಾಜ್ ಹುಳಿಯಾರ್, ವಸುಂಧರಾ ಭೂಪತಿ ಸದಸ್ಯರಾಗಿದ್ದಾರೆ.

ಪೀಠಗಳಿಗೆ ಏಕರೂಪ ಅನುದಾನದ ಅಗತ್ಯವಿದೆ. ಈಗಾಗಲೇ ವಿ.ವಿ.ಗಳಿಂದ ಮಾಹಿತಿ ಸಂಗ್ರಹಿಸಿದ್ದು ಬಜೆಟ್ ಮಂಡನೆಗೂ ಮೊದಲೇ ಸಮಿತಿಯು ಸರ್ಕಾರಕ್ಕೆ ವರದಿ ನೀಡಲಿದೆ.
– ಪ್ರೊ.ಬರಗೂರು ರಾಮಚಂದ್ರಪ್ಪ, ಸಮಿತಿಯ ಅಧ್ಯಕ್ಷರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.