ಬೆಂಗಳೂರು: ‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿಗಳ ಸಹಕಾರ ಸಂಘವನ್ನು ಸ್ಥಾಪಿಸಲು ಮುಂದಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಫಲಾನುಭವಿಗಳಿಂದ ₹1,250 ಸದಸ್ಯತ್ವ ಶುಲ್ಕ ಮತ್ತು ತಿಂಗಳಿಗೆ ₹200ರಂತೆ ಠೇವಣಿ ಸಂಗ್ರಹಿಸಲು ತೀರ್ಮಾನಿಸಿದೆ.

‘ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ’ ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆಯಡಿ ಈವರೆಗೆ 1.24 ಕೋಟಿ ಫಲಾನುಭವಿಗಳಿಗೆ ತಿಂಗಳಿಗೆ ತಲಾ ₹2,000ರಂತೆ, ಈವರೆಗೆ 26 ಕಂತುಗಳನ್ನು ಪಾವತಿಸಿದೆ.

ಪ್ರತಿ ತಿಂಗಳು ನೀಡುವ ₹2,000ದಲ್ಲಿ ಸಹಕಾರ ಸಂಘ ಬಲಗೊಳಿಸಲು ಠೇವಣಿ ರೂಪದಲ್ಲಿ ₹200 ಅನ್ನು ಕಡಿತಗೊಳಿಸಲಾಗುತ್ತದೆ. ಸಹಕಾರ ಸಂಘ ಸ್ಥಾಪನೆ ಪ್ರಕ್ರಿಯೆ ಆರಂಭವಾದ ಬಳಿಕ ಆರು ತಿಂಗಳವರೆಗೆ ಮಹಿಳೆಯರ ಖಾತೆಗೆ ₹1,800 ಮಾತ್ರ ಜಮೆಯಾಗಲಿದೆ. ಉಳಿದ ಮೊತ್ತವು ಸದಸ್ಯರ ಖಾತೆಯಲ್ಲಿಯೇ ಇರಲಿದೆ.

ಫಲಾನುಭವಿಗಳನ್ನು ಸಂಘಟಿಸಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ತರಬೇತಿ ನೀಡುವುದಕ್ಕಾಗಿ ಈ ಸಹಕಾರ ಸಂಘ ಹುಟ್ಟು ಹಾಕಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಎಲ್ಲ ಫಲಾನುಭವಿಗಳನ್ನು ಸದಸ್ಯರನ್ನಾಗಿಸುವ ಗುರಿ ಹೊಂದಲಾಗಿದೆ. ಸಂಘದ ಮೂಲಕ ಈ ಮಹಿಳೆಯರಿಗೆ ವಿವಿಧ ಉದ್ದೇಶಗಳಿಗೆ ಸಾಲ–ಸೌಲಭ್ಯ ಒದಗಿಸುವ ಮೂಲಕ ಮಹಿಳೆಯರನ್ನು ಉದ್ಯಮಿಗಳಾಗಿಸುವ ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶ ಹೊಂದಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳಿದೆ.

₹30 ಸಾವಿರದಿಂದ ₹3 ಲಕ್ಷದವರೆಗೆ ಸಾಲ

ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ₹30 ಸಾವಿರದಿಂದ ₹3 ಲಕ್ಷದವರೆಗೆ ವೈಯಕ್ತಿಕ ಸಾಲ ಒದಗಿಸಲಾಗುವುದು. ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಸಮನಾಗಿ ವಾರ್ಷಿಕ ಶೇ 7 ರಿಂದ ಶೇ 9 ಅಥವಾ ಅದಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಉದ್ದೇಶಿಸಲಾಗಿದೆ. ಸಾಲದ ಹಣವನ್ನು ಮಹಿಳೆಯರು ಸಣ್ಣಪುಟ್ಟ ವ್ಯಾಪಾರ, ಗುಡಿ ಕೈಗಾರಿಕೆ, ಕೃಷಿ, ಪಶುಸಂಗೋಪನೆ, ಮಕ್ಕಳ ಶಿಕ್ಷಣ, ವಾಹನ ಖರೀದಿಗೆ ಬಳಸಬಹುದು. ಇದರಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಾಯಕವಾಗುತ್ತದೆ ಎಂಬುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳಿದೆ.

ಸದಸ್ಯತ್ವ ಪಡೆಯಲು ಒಂದು ಬಾರಿಗೆ ₹1,000 ಷೇರು ಹಣ ನೀಡಬೇಕು. ಇದು ₹1,250ರ ಸದಸ್ಯತ್ವದ ಶುಲ್ಕದಲ್ಲಿ ಸೇರಿದೆ. ಅಲ್ಲದೇ, ಪ್ರತಿ ತಿಂಗಳು ₹200 ರಂತೆ ಕನಿಷ್ಠ ಆರು ತಿಂಗಳವರೆಗೆ ಉಳಿತಾಯ ರೂಪದಲ್ಲಿ ಜಮೆ ಮಾಡಬೇಕು. ಈ ರೀತಿ ಉಳಿತಾಯ ಮಾಡಿದವರು ಸಾಲ ಪಡೆಯಲು ಅರ್ಹರಾಗುತ್ತಾರೆ. ಸಾಲ ಪಡೆಯುವುದಕ್ಕೆ ಜಾಮೀನು (ಶ್ಯೂರಿಟಿ) ಅಗತ್ಯವಿರುವುದಿಲ್ಲ. ಸಂಪೂರ್ಣ ನಗದುರಹಿತ ಡಿಜಿಟಲ್ ಪಾವತಿಯ ಮೂಲಕ ವಹಿವಾಟಿಗೆ ಆದ್ಯತೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.